ಮಡಿಕೇರಿ, ಜ. 18: ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಕೊಡಗಿನ ವಿ.ಆರ್. ಸುನಿತಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭೌತಶಾಸ್ತ್ರ ವಿಭಾಗದಲ್ಲಿ ಅಯೋನಿಕ್ ಕಂಡಕ್ಟರ್ಸ್ ಫಾರ್ ಎನರ್ಜಿ ಸ್ಟೋರೆಜ್ ಅಪ್ಲಿಕೇಷನ್ಸ್ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಿ ಮಂಡಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯ ತನ್ನ 17ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

ಬೆಂಗಳೂರಿನ ಪಿ.ಇ.ಎಸ್. ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿತಾ ಅವರು ಮೂಲತ: ಕುಶಾಲನಗರದ ಕುವೆಂಪು ಬಡಾವಣೆಯ ರುಕ್ಮಿಣಿ ಹಾಗೂ ರಾಮಚಂದ್ರನ್ ನಾಯರ್ ಅವರ ಪುತ್ರಿಯಾಗಿದ್ದಾರೆ.