ಮಡಿಕೇರಿ, ಜ. 17: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲ ವಿ. ಸೀನಿವಾಸನ್ ಅವರಿಗೆ ಥೈಲ್ಯಾಂಡಿನಲ್ಲಿ ಕೊಡಮಾಡುವ ಗ್ಲೋಬಲ್ ಪ್ರಶಸ್ತಿ ದೊರೆತಿದೆ.ಇತ್ತೀಚೆಗೆ ಬ್ಯಾಂಕಾಕ್‍ನಲ್ಲಿ ನಡೆದ ಸಾಧಕರು ಮತ್ತು ಅಧ್ಯಾಪಕರ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸುಶೀಲ್ ಕುಮಾರ್ ಸಿಂಗ್ ‘ರಾಷ್ಟ್ರೀಯ ಶಿಕ್ಷ ರತನ್’ ಪ್ರಶಸ್ತಿ ವಿತರಿಸಿದರು.ಸೀನಿವಾಸನ್ ಅವರು ಈ ಹಿಂದೆ ಅಸ್ಸಾಮಿನ ವಿವೇಕಾನಂದ ಟ್ರಸ್ಟ್ ಶಾಲೆಯಲ್ಲಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿದ್ದು, ಬಳಿಕ ಕೊಡಗಿಗೆ ಆಗಮಿಸಿದರು. ಅವರಿಗೆ 2002ರಲ್ಲಿ ಅಸ್ಸಾಮಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, 2010ರಲ್ಲಿ ರಾಷ್ಟ್ರಮಟ್ಟದ ‘ಕೀಪರ್ ಆಫ್ ಫ್ಲೇಮ್’ ಪ್ರಶಸ್ತಿ ಈ ಹಿಂದೆ ದೊರೆತಿತ್ತು.
ಪ್ರಶಸ್ತಿಯ ಯಶಸ್ಸು ಶಾಲಾ ಅಧ್ಯಕ್ಷರು ಹಾಗೂ ಅಧ್ಯಾಪಕ ವೃಂದಕ್ಕೆ ಸಲ್ಲುತ್ತದೆ ಎಂದು ಸೀನಿವಾಸನ್ ‘ಶಕ್ತಿ’ಯೊಂದಿಗೆ ನುಡಿದರು.