ಮಡಿಕೇರಿ, ಜ. 16: ಕೊಡವರ ಕುಲಶಾಸ್ತ್ರ ಅಧ್ಯಯನ ಪುನರಾಂಭಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಎನ್.ಯು. ನಾಚಪ್ಪ ಕೊಡವರವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಪುಲ್ಲೆರ ಕಾಳಪ್ಪ, ಪುಲ್ಲೆರ ಸ್ವಾತಿ, ಕಾಟುಮಣಿಯಂಡ ಉಮೇಶ್, ಅಪ್ಪಾರಂಡ ಪ್ರಕಾಶ್, ಬಾಚಮಂಡ ಕಸ್ತೂರಿ, ಬಾಚಮಂಡ ಬೆಲ್ಲು, ಅರೆಯಡ ಸವಿತ, ಅರೆಯಡ ಗಿರೀಶ್, ಬೊಪ್ಪಂಡ ಬೊಳ್ಳಮ್ಮ, ಮಂದಪಂಡ ಮನೋಜ್, ಬಲ್ಲಚಂಡ ಟಿಟ್ಟು, ಬಲ್ಲಚಂಡ ರಾಮಚಂದ್ರ, ಐತೀಚಂಡ ಭೀಮಯ್ಯ, ಬೇಪಡಿಯಂಡ ಬಿದ್ದಪ್ಪ ಮತ್ತಿತರರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಮೂಲಕ ಮನವಿ ಪತ್ರ ಕಳುಹಿಸಲಾಯಿತು.