ಮಡಿಕೇರಿ, ಜ. 17: ಮಾನಸಿಕ ಬೆಳವಣಿಗೆಗೆ, ಹರ್ಷೋಲ್ಲಾಸಕ್ಕೆ ಸಾಹಿತ್ಯ ಸದಾ ಸ್ಫೂರ್ತಿಯ ಚಿಲುಮೆ ಯಂತಿರುತ್ತದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮರ್ಥ ಕನ್ನಡಿಗರು ಸಂಸ್ಥೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಉತ್ತಪ್ಪ, ಯಾಂತ್ರೀಕೃತ ಜೀವನದಲ್ಲಿ ಸಾಹಿತ್ಯ, ಸಂಸ್ಕøತಿಯ ಮೂಲಕ ಒಂದಿಷ್ಟು ಸ್ಫೂರ್ತಿಯನ್ನು ದೊರಕಿಸಿಕೊಡಬೇಕು. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಪೆÇ್ರೀತ್ಸಾಹಿಸಬೇಕೆಂದು ಕರೆ ನೀಡಿದರು. ಸಾಹಿತ್ಯದಲ್ಲಿ ಸಕ್ರಿಯ ರಾಗಿರುವವರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಸಾಧನೆ ತೋರುವದು ಖಂಡಿತಾ, ಅಧಿಕಾರಿ, ರಾಜಕಾರಣಿ, ಬೇರೆ ಯಾವದೇ ವೃತ್ತಿಯವನಾಗಿರಲಿ ಸಾಹಿತ್ಯದಲ್ಲಿ ತೊಡಗಿಸಿಕೊಂಡವರಿಗೆ ಸಾಧನೆ ಖಂಡಿತಾ ಸುಲಭಸಾಧ್ಯ ಎಂದು ರಮೇಶ್ ಹೇಳಿದರು. ಧ್ಯಾನದ ಶಕ್ತಿ ಸಾಹಿತ್ಯಕ್ಕಿದೆ ಎಂದು ಹೇಳಿದ ರಮೇಶ್ ಉತ್ತಪ್ಪ, ಸಾಹಿತ್ಯದ ಮೂಲಕವೇ ಏಕಾಗ್ರತೆ ಸಾಧ್ಯವಿದೆ ಎಂದು ಹೇಳಿದರು.

ಮುಂದಿನ ದಸರಾ ಕವಿ ಗೋಷ್ಠಿಯಲ್ಲಿ ಕಾವ್ಯ ತರಬೇತಿ ಶಿಬಿರದೊಂದಿಗೆ ವಿದ್ಯಾರ್ಥಿ ಕವಿಗೋಷ್ಠಿಯನ್ನು ಆಯೋಜಿಸ ಲಾಗುತ್ತದೆ ಎಂದು ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರೂ ಆಗಿರುವ ರಮೇಶ್ ಉತ್ತಪ್ಪ ಘೋಷಿಸಿದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ಅದ್ಯಕ್ಷ ಅನಿಲ್ ಎಚ್.ಟಿ., ಕೊಡಗಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಕಾವ್ಯ ಪ್ರೀತಿ ಅಪಾರವಾಗಿದೆ. ಇದಕ್ಕೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅಗಾಧ ಪೆÇ್ರೀತ್ಸಾಹವೇ ಕಾರಣ ಎಂದರಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೂಡ ಅನೇಕ ಕಾರ್ಯಕ್ರಮಗಳ ಮೂಲಕ ಹಲವು ಭಾಷೆಗಳ ಪಾರಮ್ಯವುಳ್ಳ ಕೊಡಗಿನಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತ ವಾಗಿರಿಸಿದೆ ಎಂದು ಶ್ಲಾಘಿಸಿದರು.

ಸಮರ್ಥ ಕನ್ನಡ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಕುರಿತ ವಿಚಾರಗೋಷ್ಠಿ ಹಮ್ಮಿಕೊಂಡಿದ್ದನ್ನು ಶ್ಲಾಘಿಸಿದ ಅನಿಲ್, ರೋಟರಿ ಸಂಸ್ಥೆ ಕೂಡ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಈ ವರ್ಷ ಆದ್ಯತೆ ನೀಡಿದ್ದು ರೋಟರಿ ಜಿಲ್ಲಾ ಮಟ್ಟದಲ್ಲಿ 1 ಲಕ್ಷ ಸಸಿಗಳನ್ನು ಈಗಾಗಲೇ ನೆಟ್ಟಿದೆ. ಮಿಸ್ಟಿ ಹಿಲ್ಸ್ ವತಿಯಿಂದ ವಿವಿಧ ಶಾಲೆ, ಪ್ರಾರ್ಥನಾ ಮಂದಿರಗಳಲ್ಲಿ 1 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿದಿಸೆಯಲ್ಲಿಯೇ ಸಾಹಿತ್ಯಾಸಕ್ತಿ ಹೆಚ್ಚಬೇಕು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳ ಆಸಕ್ತಿಯ, ಅಭಿರುಚಿಯ ಕಲೆಗಳಿಗೆ ಪೆÇೀಷಕರು, ಶಿಕ್ಷಕ ವರ್ಗ ಬೆಂಬಲವಾಗಿರಬೇಕು ಎಂದು ಕರೆ ನೀಡಿದರಲ್ಲದೇ, ಪತ್ರಿಕೆ ಮತ್ತು ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವದಾಗಿಯೂ ಸಂತೋಷ್ ತಿಳಿಸಿದರು. ಎಲ್ಲ ಭಾಷಿಕರನ್ನೊಳಗೊಂಡ ಪುಟ್ಟ ಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರುವ ಕಾರ್ಯವನ್ನು ಪರಿಷತ್ ಮಾಡಿದೆ ಎಂದು ಹೇಳಿದರು.

ಸಮರ್ಥ ಕನ್ನಡಿಗ ಸಂಸ್ಥೆಯ ಪ್ರಧಾನ ಸಂಚಾಲಕ ದೆಗ್ಗನಹಳ್ಳಿ ಆನಂದ್ ಮಾತನಾಡಿ, ಸಮರ್ಥ ಕನ್ನಡಿಗ ಉದಯೋನ್ಮುಖ ಕಲಾವಿದರು, ಸಾಹಿತಿ, ಲೇಖಕರು, ಕವಿಗಳಿಗೆ ವೇದಿಕೆ ನೀಡುವ ಸಾಹಿತ್ಯ ಪರ ಸಂಸ್ಥೆಯಾಗಿದ್ದು, ರಾಜ್ಯವ್ಯಾಪಿ ಹಲವಾರು ಕಾರ್ಯಕ್ರಮ ಆಯೋಜಿಸಿದೆ. ಸಾಹಿತ್ಯದಲ್ಲಿ ತೊಡಗಿಸಿ ಕೊಂಡವರು ಅನಾರೋಗ್ಯ ಪೀಡಿತರಾದ ಸಂದರ್ಭ ಆರ್ಥಿಕ ನೆರವನ್ನು ನೀಡುವ ಉದ್ದೇಶ ಹೊಂದಲಾಗಿದೆ. ಪ್ರತಿಭಾ ಪುರಸ್ಕಾರ, ಪುಸ್ತಕ ಪ್ರಕಟಣೆಗೆ ನೆರವು, ಶಿಫಾರಸ್ಸು, ಲಾಬಿಗಳ ಮೂಲಕ ಪದೇ ಪದೇ ಅವಕಾಶ ಪಡೆಯುವ ವ್ಯವಸ್ಥೆ ವಿರುದ್ದ ಧ್ವನಿ ಎತ್ತುವ ಸಂಸ್ಥೆಯಾಗಿದ್ದು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ವೃದ್ಧಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಮರ್ಥ ಕನ್ನಡಿಗ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮಿ ಮಾತನಾಡಿ, ಜಿಲ್ಲೆಯಲ್ಲಿನ ಕನ್ನಡ ಮನಸ್ಸುಗಳ ಸಹಕಾರದೊಂದಿಗೆ ಭವಿಷ್ಯದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಮರ್ಥ ಕನ್ನಡ ಸಂಸ್ಥೆಯ ಜಿಲ್ಲಾ ಪದಾಧಿಕಾರಿ ಡಾ. ವೀಣಾ ನಿರೂಪಿಸಿ, ಪಿ.ಎಸ್. ವೈಲೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೇಯ ಪ್ರಾರ್ಥಿಸಿ, ವಿ.ಜೆ. ಮೌನ ಸ್ವಾಗತ ನೃತ್ಯ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ‘ಹಸಿರೇ ಉಸಿರು’ ಎಂಬ ಕಿರು ರೂಪಕವನ್ನು ಪ್ರಜ್ಞಾ ಕಲಾ ಕೇಂದ್ರದ ಪುಟಾಣಿಗಳು ಪ್ರದರ್ಶಿಸಿ ಮನಗೆದ್ದರು.

ಚುಟುಕು ಕವಿ ಹಾ.ತಿ. ಜಯಪ್ರಕಾಶ್, ಸಾಹಿತಿ ಬಿ.ಎ. ಶಂಷುದ್ದೀನ್, ಶಿಕ್ಷಕ ಸಿದ್ದರಾಜು, ಗೋವಿಂದರಾಜು, ಶಿಕ್ಷಕಿ ರುಬಿನಾ, ಯುವಕವಿ ಅಣ್ಣಪ್ಪ ಮೇಟಿ ಗೌಡ, ಸಂತೋಷ್ ಕುಮಾರ್ ಬಿ.ಎಂ., ಚುಕ್ಕಿ ಸಂಸ್ಥೆಯ ಮಧುಸೂದನ್ ಎಸ್.ಕೆ., ಡಾ. ಗಂಗಾಧರ್, ಎಂ.ಶೇಷು, ಹೆಚ್.ಆರ್. ಶ್ವೇತಾ ಪಾಲ್ಗೊಂಡಿ ದ್ದರು. ಜಿಲ್ಲೆಯಾದ್ಯಂತ 82 ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪ್ರೀತಿ, ವಿದ್ಯಾರ್ಥಿಗಳು ಮತ್ತು ಪರಿಸರ ಜಾಗೃತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ ಆಯೋಜಿತವಾಗಿತ್ತು.