ಸೋಮವಾರಪೇಟೆ, ಜ. 16: ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಸಾರ್ವಜನಿಕ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದೊಡ್ಡಮಳ್ತೆ ಶ್ರೀರಾಮ ಸೇವಾ ಸಮಿತಿ ಪ್ರಥಮ ಹಾಗೂ ಬಸವೇಶ್ವರ ಯುವಕ ಸಂಘ ದ್ವಿತೀಯ ಸ್ಥಾನ ಗಳಿಸಿತು.
ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ದೊಡ್ಡಮಳ್ತೆ ಗ್ರಾಮದ ಬಸವೇಶ್ವರ ಯುವತಿ ಮಂಡಳಿ ಪ್ರಥಮ ಮತ್ತು ‘ಬಿ’ ತಂಡ ದ್ವಿತೀಯ ಸ್ಥಾನಗಳಿಸಿದೆ. ಗುಡ್ಡಗಾಡು ಓಟದಲ್ಲಿ ಡಿ.ಎಚ್. ತೇಜಸ್ವಿ ಪ್ರಥಮ, ಡಿ.ಜೆ. ಪುನೀತ್ ದ್ವಿತೀಯ ಹಾಗೂ ಡಿ.ಎಚ್.ರತನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಸವೇಶ್ವರ ಯುವತಿ ಮಂಡಳಿ ಪ್ರಥಮ, ಕಾಗಡಿಕಟ್ಟೆ ಕೆಡಿಕೆ ತಂಡ ದ್ವಿತೀಯ, ಪುರುಷರ ವಿಭಾಗದಲ್ಲಿ ಹಣಕೋಡು ಗ್ರಾಮದ ಬಸವೇಶ್ವರ ಯುವಕ ಸಂಘ ಪ್ರಥಮ, ಕಾಗಡಿಕಟ್ಟೆಯ ಕಿಸಾನ್ ರಿಕ್ರಿಯೇಷನ್ ಕ್ಲಬ್ ತಂಡ ದ್ವಿತೀಯ, ವಿಷದ ಚೆಂಡು ಸ್ಪರ್ಧೆಯಲ್ಲಿ ಕೆ.ಎ.ಅಮೀರಾ ಪ್ರಥಮ, ಜಯರತ್ನ ದಿನೇಶ್ ದ್ವಿತೀಯ, ಬಸ್ಸು ಹುಡುಕಾಟ ಸ್ಪರ್ಧೆಯಲ್ಲಿ ಶಶಿಕಲಾ ಪ್ರಥಮ, ಡಿ.ಬಿ. ರೇಖಾ ದ್ವಿತೀಯ ಬಹುಮಾನ ಪಡೆದರು.
ಪುರುಷರ ವಿಭಾಗದಲ್ಲಿ ಹೆಚ್.ಡಿ. ಧೀರಜ್ ಪ್ರಥಮ, ಹೆಚ್.ಆರ್. ಬಿನುಗೌಡ ದ್ವಿತೀಯ, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಹೊನ್ನಪ್ಪ ಪ್ರಥಮ, ಎಚ್.ವಿ. ಚಂದ್ರಶೇಖರ್ ದ್ವಿತೀಯ, ರಂಗೋಲಿ ಸ್ಪರ್ಧೆಯಲ್ಲಿ ಬಿ.ಡಿ. ಆಶಾ ಪ್ರಥಮ, ಜಯರತ್ನ ದಿನೇಶ್ ದ್ವಿತೀಯ, ಬಳೆ ರಂಗೋಲಿ ಸ್ಪರ್ಧೆಯಲ್ಲಿ ಗೀತಾ ಪ್ರಥಮ, ಮಂಜುಳಾ ದ್ವಿತೀಯ ಸ್ಥಾನವನ್ನು ಗಳಿಸಿದರು. ಸ್ಪರ್ಧೆಯಲ್ಲಿನ ವಿಜೇತರಿಗೆ ಶಾಸಕ ಅಪ್ಪಚ್ಚುರಂಜನ್ ಬಹುಮಾನ ವಿತರಿಸಿದರು.
ಈ ಸಂದರ್ಭ ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ದಿವಾಕರ್, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಶಾಲಾ ಮುಖ್ಯ ಶಿಕ್ಷಕ ರೇಣುಕಾಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷರು ಸೇರಿದಂತೆ ಇತರರು ಇದ್ದರು.