ಮಡಿಕೇರಿ ಜ. 16: ಹೊದವಾಡದ ಓಯಸಿಸ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಗುಂಡಿಕೆರೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಮೂರ್ನಾಡು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ, ಹಂಸ ಎಚ್.ಎ., ಹೊದ್ದೂರು ಗ್ರಾ.ಪಂ. ಅಧ್ಯಕ್ಷರಾದ ದಿನೇಶ್, ಪ್ರಮುಖರಾದ ಚಿಲ್ಲಂಡ ದರ್ಶನ್ ಪಾಪು, ಜೆಡಿಎಸ್ ಪ್ರಮುಖರಾದ ಸುಲೈಮಾನ್, ಅಹಮದ್, ಅದುಕ ಹಾಜಿ, ಅಲ್‍ಫಲಾ ಅಹಮ್ಮದ್, ಕೆ.ಇ.ಮೈದು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಡಿಯತ್ತೂರು ಕಾವೇರಿ ಎಸ್ಟೇಟ್‍ನ ಪಟ್ಟು ಪಳಂಗಪ್ಪ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ಪಂದ್ಯಾವಳಿಯ ಆಯೋಜಕರಾದ ರಶೀದ್, ಓಯಸಿಸ್ ಕ್ಲಬ್ ಪದಾಧಿಕಾರಿಗಳಾದ ಆಬಿದ್, ಫೈಝóಲ್, ಹಂಸ, ನಿಸಾಮ್, ಅಂದಾಯಿ, ಅನೀಶ್ ಮತ್ತಿತರರು ಉಪಸ್ಥಿತರಿದ್ದರು.