ವೀರಾಜಪೇಟೆ, ಜ. 17: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಮನೆಯ ಕೊಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಕ್ಲೂರು ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆಯ ತಾಲೂಕಿನ ಚೆಂಬೆಬೆಳ್ಳೂರು ಕುಕ್ಲೂರು ಗ್ರಾಮದ ಭದ್ರಕಾಳಿ ದೇವಾಲಯದ ಸನಿಹವಿರುವ ಕಾಲೋನಿಯ ನಿವಾಸಿಯಾದ ಮಂಜು ಮತ್ತು ಬೋಜಕ್ಕಿ ಎಂಬವರ ಪುತ್ರನಾದ ಅರುಣ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮೃತನು ಕೂಲಿ ಕಾರ್ಮಿಕನಾಗಿದ್ದ. ಮೃತನ ತಂದೆ ಮಂಜು ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.