ಮಡಿಕೇರಿ, ಜ. 16: ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ಸಂತೋಷ ಕೂಟ ತಾ. 21 ರಂದು ಪೆನ್ಷನ್ ಲೇನ್‍ನಲ್ಲಿರುವ ಬೆಳ್ಯಪ್ಪ ಸ್ಮಾರಕ ಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಆಗಮಿಸಿದ ಬಳಿಕ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.ಸಮಾಜ ಬಾಂಧವರಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ಎಂ.ಡಿ. ನಾಣಯ್ಯ (9480449138), ಕಾರ್ಯದರ್ಶಿ ಮಂಜುನಾಥ್ ಮೂಲ್ಯ (9743042203) ಇವರನ್ನು ಸಂಪರ್ಕಿಸಬಹುದಾಗಿದೆ.