ಶನಿವಾರಸಂತೆ, ಜ. 16: ಯೋಗ ಬಂಧುಗಳು, ಸಹಕಾರ ಬ್ಯಾಂಕ್ ಹಾಗೂ ರೋಟರಿ ವತಿಯಿಂದ ಬೊಜ್ಜು ಮತ್ತು ಮಧುಮೇಹಕ್ಕಾಗಿ ಉಚಿತ ಯೋಗ ಶಿಬಿರ ಹಾಗೂ ರಥ ಸಪ್ತಮಿ ಪ್ರಯುಕ್ತ ವಿಶೇಷ ಯೋಗ ಕಾರ್ಯಕ್ರಮ ತಾ. 17 ರಿಂದ (ಇಂದಿನಿಂದ) 24ರ ವರೆಗೆ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 5.15 ರಿಂದ ಸಂಜೆ 7ರವರೆಗೆ ಶಿಬಿರಾರ್ಥಿಗಳ ನೋಂದಾವಣೆ ನಡೆಯಲಿದೆ. ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಶಿಬಿರ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಯಾಗಿ ಮಕ್ಕಳ ತಜ್ಞ ಡಾ. ಆರ್.ವಿ. ಚಿದಾನಂದ್ ಪಾಲ್ಗೊಳ್ಳಲಿದ್ದಾರೆ.
ತಾ. 24 ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಪ್ರಣವ ಯೋಗ ಪ್ರತಿಷ್ಠಾನದ ನಿರ್ದೇಶಕ ಅಶೋಕ ವಿ. ರೆಡ್ಡಿ ಅಧ್ಯಕ್ಷತೆ ವಹಿಸುತ್ತಾರೆ. ಮುಖ್ಯ ಅತಿತಿಯಾಗಿ ರೋಟರಿ ಅಧ್ಯಕ್ಷ ಎಚ್.ಎಸ್. ವಸಂತಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಯೋಗ ಶಿಕ್ಷಕರಾದ ಎ.ಡಿ. ಮೋಹನ್ ಕುಮಾರ್ ಹಾಗೂ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ ಮೊ. 9448517342, 9448919518.