ವರದಿ : ವಾಸು ಸಿದ್ದಾಪುರ, ಜ. 17: ಮನೆಯಲ್ಲಿ ಸಾಕಿದ ನಾಯಿಯೊಂದನ್ನು ವಿಚಿತ್ರ ಕಾಡು ಪ್ರಾಣಿಯೊಂದು ಧಾಳಿ ನಡೆಸಿ ಸಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಾಲ್ದಾರೆ ಗ್ರಾಮದ ಕಾಫಿ ಬೆಳೆಗಾರ ಮೂಡಗದ್ದೆ ಜಯರಾಮಕೃಷ್ಣ ಎಂಬವರಿಗೆ ಸೇರಿದ ಮನೆಯ ಸಮೀಪದ ಅವರ ನಾಯಿ ಗೂಡಿನ ಬಳಿ ತೋಳವನ್ನು ಹೊಲುವ ರೀತಿಯಲ್ಲಿ ಇರುವ ವಿಚಿತ್ರ ಪ್ರಾಣಿಯೊಂದು ರಾತ್ರಿ ಸಮಯದಲ್ಲಿ ಜಯರವರಿಗೆ ಸೇರಿದ 8 ವರ್ಷ ಪ್ರಾಯದ ಲ್ಯಾಬ್ರಡಾರ್ ತಳಿಯ ಸಾಕು ನಾಯಿಯೊಂದನ್ನು ಗೂಡಿನ ಸಮೀಪದಿಂದ ಧಾಳಿ ನಡೆಸಿ ಎಳೆದುಕೊಂಡು ಹೋಗಿದೆ. ನಾಯಿ ಬೊಬ್ಬಿಡುತ್ತಿದ್ದನ್ನು ಕೇಳಿ ಮನೆಯ ಮಾಲೀಕ ಜಯರಾಮಕೃಷ್ಣ ಕತ್ತಲೆಯಲ್ಲಿ ಟಾರ್ಚ್ ಬೆಳಕಿನೊಂದಿಗೆ ಧಾವಿಸಿ ಬರುವಷ್ಟರಲ್ಲಿ ವಿಚಿತ್ರ ಪ್ರಾಣಿ ಏಕಾಏಕಿ ನಾಯಿಯ ಕುತ್ತಿಗೆ ಭಾಗವನ್ನು ಕಚ್ಚಿ ಗಾಯಗೊಳಿಸಿ ಕಾಲಿನ ಮಾಂಸವನ್ನು ತಿಂದು ಕಾಫಿ ತೋಟದೊಳಗೆ ಸಾಯಿಸಿ ಕಾಫಿ ತೋಟದಲ್ಲಿ ಮರೆಯಾಯಿತು ಎಂದು ಜಯನವರು ತಿಳಿಸಿದರು. ಟಾರ್ಚ್ ಬೆಳಕಿನ ಮುಖಾಂತರ ಪ್ರತ್ಯಕ್ಷ ಕಂಡ ಜಯ ಅವರು ಇಂತಹ ಪ್ರಾಣಿಯನ್ನು ತಾನು ಇವರೆಗೂ ಕಂಡಿರುವದಿಲ್ಲ ಈ ಪ್ರಾಣಿಯ ಬಗ್ಗೆ ಮಾಹಿತಿ ಕಲೆಹಾಕಿದಾಗವಿದೇಶದಲ್ಲಿ ಇಂತಹ ಪ್ರಾಣಿಗಳು ಇರುವದಾಗಿ ತಿಳಿಸಿದರು.