ಸುಂಟಿಕೊಪ್ಪ, ಜ. 17: ಸೋಮವಾರಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಯುವ ಮೋರ್ಚಾ ಸಮಾವೇಶಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರ ಜಾಥಾಕ್ಕೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಚಾಲನೆ ನೀಡಿದರು. ಕೇರಳದ ಚಂಡೆ ಮೂಲಕ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು.

ಬಿಜೆಪಿ ಮುಖಂಡರಾದ ಬಿ.ಕೆ. ಮೋಹನ್, ನಾಗೇಶ್ ಪೂಜಾರಿ, ಪಿ.ಸಿ. ಮೋಹನ್, ತೇಜಸ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಜ್ಯೋತಿ, ರಂಜಿತ್ ಪೂಜಾರಿ, ದಾಸನ್, ರಮೇಶ್, ಲೀಲಾವತಿ, ಗಿರಿಜ, ಉದಯಕುಮಾರ್, ಕ್ಲೈವಾ ಪೊನ್ನಪ್ಪ, ಇತರರು ಇದ್ದರು.