ಕುಶಾಲನಗರ, ಜ 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಶಾಲನಗರ ಪ್ರಗತಿಬಂಧು ಸ್ವಸಹಾಯ ಸಂಘ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಹಯೋಗದೊಂದಿಗೆ ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ದೇವಾಲಯ ಆವರಣ ಮತ್ತು ಕಾವೇರಿ ನದಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮ ಅಡಿಯಲ್ಲಿ ಯೋಜನೆಯ ಕುಶಾಲನಗರ ಒಕ್ಕೂಟದ ಮಹಿಳೆಯರು ಕಾವೇರಿ ನದಿ ತಟದ ಸ್ವಚ್ಚತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ಹರೀಶ್ ಮಾತನಾಡಿದರು. ಕುಶಾಲನಗರ ಒಕ್ಕೂಟದ ಅಧ್ಯಕ್ಷರಾದ ಗುಲ್ಜರ್ ಭಾನು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ನದಿ ಸ್ವಚ್ಚತಾ ಅಭಿಯಾನದ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಡಿ.ಆರ್.ಸೋಮಶೇಖರ್, ಅಯ್ಯಪ್ಪಸ್ವಾಮಿ ದೇವಾಲಯ ಮಾಜಿ ಅಧ್ಯಕ್ಷರಾದ ಕೆ.ಆರ್.ಶಿವಾನಂದನ್, ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷರಾದ ವಿ. ಎನ್. ವಸಂತಕುಮಾರ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭೋಜಣ್ಣ ರೆಡ್ಡಿ, ಪತ್ರಕರ್ತ ಕೆ.ಬಿ.ಮಂಜುನಾಥ್, ಸೇವಾ ಪ್ರತಿನಿಧಿಗಳಾದ ವಿಜಯಲಕ್ಷ್ಮಿ, ಡಾಟಿ, ಜಯಲಕ್ಷ್ಮಿ, ಯಶೋದ, ಗಿರಿಜಾ ಮತ್ತಿತರರು ಇದ್ದರು. ಒಕ್ಕೂಟದ 50 ಕ್ಕೂ ಅಧಿಕ ಸದಸ್ಯರು ನದಿ ತಟ ಮತ್ತು ದೇವಾಲಯ ಆವರಣ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.