ಶನಿವಾರಸಂತೆ, ಜ. 16: ಸಮೀಪದ ಕೊಡ್ಲಿಪೇಟೆಯ ಎಸ್‍ಎಲ್‍ಎಸ್ ಮತ್ತು ಎಸ್‍ಕೆಎಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಎಸ್‍ಎಲ್‍ಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಲೋಹಿತ್, ಸ್ಕಂದ, ನುಶ್ಯಫ್, ಪೋಷಿತ್ ಮತ್ತು ಎಸ್‍ಕೆಎಸ್ ವಿದ್ಯಾಸಂಸ್ಥೆಯ ಕೃತಜ್ಞಾ, ಮೋಕ್ಷಿತ್, ಶಶಾಂಕ್ ಹಾಗೂ ಮಂಜುನಾಥ್ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ತರಬೇತುದಾರರಾಗಿ ಗಣೇಶ್ ಪ್ರಸಾದ್, ಪಳನಿ ಮತ್ತು ಅರುಣ್ ಕಾರ್ಯನಿರ್ವಹಿಸಿದ್ದಾರೆ.