ಮಡಿಕೇರಿ, ಜ. 15: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಡಿಕೆÉೀರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಸೋಲು ಅನುಭವಿಸಲು ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರೇ ನೇರ ಕಾರಣವೆಂದು ಜಾತ್ಯತೀತ ಜನತಾದಳದ ಸಂಘÀಟನಾ ಕಾರ್ಯದರ್ಶಿ ಪಿ.ಡಿ. ಅಣ್ಣಯ್ಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಟಸ್ಥ ಜನತಾದಳದ ಹೆಸರಿನಲ್ಲಿ ಯಂ.ಸಿ. ನಾಣಯ್ಯ ಅವರ ಬಣ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯವೆಂದರು. ಕಳೆÉದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜೀವಿಜಯ ಅವರ ಪರ ನಾಣಯ್ಯ ಅವರು ಯಾವದೇ ಪ್ರಚಾರ ಅಥವಾ ಹೋರಾಟವನ್ನು ಮಾಡಿಲ್ಲ. ಪಕ್ಷದಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿರುವ ಅವರು, ಇದೀಗ ಬಣ ರಾಜಕಾರಣದ ಮೂಲಕ ಗೊಂದಲ ಸೃಷ್ಟಿಸುತ್ತಿರುವದು ಸರಿಯಲ್ಲ. ವಿಚಾರವಂತರಾಗಿರುವ ನಾಣಯ್ಯ ಅವರ ಬಗ್ಗೆ ಜೆಡಿಎಸ್‍ನ ಎಲ್ಲಾ ಕಾರ್ಯಕರ್ತರಿಗೂ ಗೌರವವಿದೆ. ಅದೇ ರೀತಿ ಹಿರಿಯ ರಾಜಕಾರಣಿ ಜೀವಿಜಯ ಅವರಿಗೂ ತಮ್ಮದೇ ಆದ ಘನತೆ ಗೌರವಗಳಿದೆ. ಇದನ್ನು ತಟಸ್ಥ ಜೆಡಿಎಸ್ ಬಣ ಎಂದು ಹೇಳಿಕೊಳ್ಳುತ್ತಿರುವವರು ಅರಿತುಕೊಳ್ಳಬೇಕೆಂದು ಅಣ್ಣಯ್ಯ ಹೇಳಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವಕ್ತಾರ ಕೆ.ಎಸ್. ಕಾಂತರಾಜು ಮಾತನಾಡಿ, ಜೀವಿಜಯ ಅವರ ವಿರುದ್ಧದ ಹೇಳಿಕೆ ಖಂಡನೀಯವೆಂದರು. ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಶಿಫಾರಸು ಮಾಡಿದ ನಾಣಯ್ಯ ಅವರು ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡುತ್ತಿದ್ದರು ಎಂದು ಆರೋಪಿಸಿದರು. ಜೆಡಿಎಸ್‍ನ್ನು ತೊರೆದು ಬಿಜೆಪಿಯನ್ನು ಸೇರಲು ಮುಂದಾಗಿರುವ ವಿಜಯ್ ಹಾಗೂ ಭರತ್ ಅವರ ಆಗಮನವನ್ನು ಬಿಜೆಪಿ ಮಂದಿ ವಿರೋಧಿಸುತ್ತಿದ್ದಾರೆ. ಆದ್ದರಿಂದ ಇವರುಗಳು ಇನ್ನಾದರು ಎಚ್ಚೆತ್ತುಕೊಂಡು ತಮ್ಮ ತೀರ್ಮಾನವನ್ನು ಬದಲಾಯಿಸಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಕೈಜೋಡಿಸಲಿ ಎಂದು ಕಾಂತರಾಜು ಒತ್ತಾಯಿಸಿದರು.
ತಾ. 25 ರಂದು ಮಧು ಬಂಗಾರಪ್ಪ ಯುವ ಜೆಡಿಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಕೂಡ ಸಧ್ಯದಲ್ಲೆ ಜಿಲ್ಲೆಗೆ ಆಗಮಿಸಲಿದ್ದು ಪಕ್ಷದೊಳಗಿನ ಎಲ್ಲಾ ಗೊಂದಲಗಳನ್ನು ನಿವಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಹೋಬಳಿ ಕಾರ್ಯಾಧ್ಯಕ್ಷ ಕೆ.ಪಿ. ರಾಜು ಉಪಸ್ಥಿತರಿದ್ದರು.