ಕುಶಾಲನಗರ, ಜ. 15: ಕುಶಾಲನಗರ ರೋಟರಿ 43ನೇ ವಾರ್ಷಿಕೋತ್ಸವ ಅಂಗವಾಗಿ ಬೆಂಗಳೂರಿನ ರಾಷ್ಟ್ರೋತ್ಹಾನ ಸಂಸ್ಥೆ ಸಹಯೋಗದೊಂದಿಗೆ ರೋಟರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ರಕ್ತದಾನ ಶಿಬಿರ ನಡೆಯಿತು.

ರೋಟರಿ ಅಧ್ಯಕ್ಷ ಎನ್.ಜಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ರೋಟರಿ ಸಹಾಯಕ ರಾಜ್ಯಪಾಲ ಮಹೇಶ್ ನಾಲ್ವಡೆ ಚಾಲನೆ ನೀಡಿದರು.

ಈ ಸಂದರ್ಭ ರೋಟರಿ ಕಾರ್ಯದರ್ಶಿ ಸಿ.ಬಿ. ಹರೀಶ್, ಕಾರ್ಯಕ್ರಮ ಅಧಿಕಾರಿ ರವೀಂದ್ರ ರೈ, ಮಾಜಿ ಅಧ್ಯಕ್ಷ ಎಸ್.ಕೆ. ಸತೀಶ್, ಶೋಭಾ ಸತೀಶ್, ಕ್ರಿಜ್ವಲ್ ಕೋಟ್ಸ್, ನಿರ್ದೇಶಕರುಗಳಾದ ಪ್ರೇಮಚಂದ್ರನ್, ಡಾ. ಹರಿ ಎ. ಶೆಟ್ಟಿ, ತಿಲಕ್, ಕೆ.ಎಸ್. ರಾಜಶೇಖರ್, ರಿಚರ್ಡ್ ಡಿಸೋಜ, ರಾಷ್ಟ್ರೋತ್ಥಾನ ರಕ್ತನಿಧಿ ಘಟಕದ ಶಿಬಿರ ಸಂಯೋಜಕ ನರಸಿಂಹಶಾಸ್ತ್ರಿ, ವೈದ್ಯ ಡಾ. ಕಾಂತರಾಜು, ಶಿಬಿರಾಧಿಕಾರಿ ಶಿವರಾಜು ಮತ್ತಿತರರು ಇದ್ದರು.