ಮಡಿಕೇರಿ, ಜ. 15: ತಾ. 12ರಂದು ದುಬೈನಲ್ಲಿ ನಿಧನರಾದ ಉದ್ಯಮಿ ಪೊನ್ನಚೆಟ್ಟಿರ ಅರುಣ್ ಕಾರ್ಯಪ್ಪ ಅವರ ಪಾರ್ಥಿವ ಶರೀರ ಇಂದು ಮಡಿಕೇರಿ ತಲಪಲಿದೆ.

ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ರೇಸ್‍ಕೋರ್ಸ್ ರಸ್ತೆಯ ಕಾವೇರಿಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವದು. ನಂತರ ಕೊಡವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಸಹೋದರ ಹಾಗೂ ಕಾವೇರಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಸಂತ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.