ಕುಶಾಲನಗರ, ಜ. 15: ಬ್ಯಾಡ್ಜ್ ಹೊಂದದ ಚಾಲಕರ ಆಟೋಗಳ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸುತ್ತಿರುವ ಹಿನ್ನೆಲೆ ಸಂಘದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಆಟೋ ಚಾಲಕರ ಸಂಘದ ಅಧ್ಯಕ್ಷರನ್ನು ಸದಸ್ಯರು ಒತ್ತಾಯಿಸಿದ ಘಟನೆ ನಡೆಯಿತು.
ಬ್ಯಾಡ್ಜ್ ಹೊಂದಿರದ ಚಾಲಕರ ಆಟೋ ರಿಕ್ಷಾಗಳಿಗೆ ಸಂಚಾರಿ ಪೊಲೀಸರು ತಡೆಯೊಡ್ಡುವದ ರೊಂದಿಗೆ ದಂಡ ವಿಧಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಘದ ಅಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕೋರಲಾಗಿದೆಯಾದರೂ ಅಧ್ಯಕ್ಷರು ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಂಘದ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಕೆಲವು ಸದಸ್ಯರು ಸಂಘದ ಅಧ್ಯಕ್ಷರ ವಿರುದ್ಧ ಹರಿಹಾಯ್ದರು. ಕೂಡಲೇ ಪೊಲೀಸ್ ಅಧಿಕಾರಿಗ ಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ವಿ.ಪಿ. ನಾಗೇಶ್, ಬ್ಯಾಡ್ಜ್ ಪಡೆದುಕೊಳ್ಳಲು ಈ ಹಿಂದೆ ಹಲವು ಬಾರಿ ಪೊಲೀಸರು ಸೂಚನೆ ನೀಡಿದ್ದರು. ಡಿಸೆಂಬರ್ ಅಂತ್ಯದವರೆಗೆ ಗಡುವು ನೀಡಿದ್ದರೂ ಕೂಡ ಕೆಲವರು ಬ್ಯಾಡ್ಜ್ ಮಾಡಿಸಿ ಕೊಳ್ಳುವಲ್ಲಿ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಈ ಸಂಬಂಧ ಡಿವೈಎಸ್ಪಿ ಅವ ರೊಂದಿಗೆ ಮತ್ತೊಮ್ಮೆ ಚರ್ಚಿಸಿ 15 ದಿನಗಳ ಕಾಲಾವಕಾಶ ಕೋರ ಲಾಗುವದು ಎಂದು ತಿಳಿಸಿದರು. ಸಭೆ ಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಚಂದ್ರು, ಮಹೇಶ್, ಕೆ.ಟಿ. ಯೋಗೇಶ್, ನಿರ್ದೇಶಕರುಗಳಾದ ಅರುಣ, ಕಿರಣ, ಮಂಜು ಮತ್ತಿತರರು ಇದ್ದರು.