ಶನಿವಾರಸಂತೆ, ಜ. 15: ಸಮೀಪದ ಅವರೆದಾಳು ಗ್ರಾಮದ ಜಾತ್ರಾ ಬನದಲ್ಲಿ ತಾ. 17ರಂದು ಕುಮಾರಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಹುಲುಕೋಡು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

ಜಾತ್ರಾ ಮಹೋತ್ಸವದ ಪ್ರಯುಕ್ತ ತಾ. 16ರಂದು ರಾತ್ರಿ 8 ಗಂಟೆಗೆ ಹುಲುಕೋಡು ಗ್ರಾಮದಲ್ಲಿ ಕುಮಾರಲಿಂಗೇಶ್ವರ ಸುಗ್ಗಿ ಉತ್ಸವ, ಮಹಾಮಂಗಳಾರತಿ, ದಾಸೋಹ ನಡೆಯಲಿದೆ.

ತಾ. 17ರಂದು ಬೆಳಿಗ್ಗೆ 6 ಗಂಟೆಗೆ ಅವರೆದಾಳು ಗ್ರಾಮದ ದೇವರ ಕೆರೆಯಿಂದ ಹುಲುಕೋಡು ಗ್ರಾಮದ ದೇವಸ್ಥಾನಕ್ಕೆ ಗಂಗೆ ತರಲಾಗುವದು. 12 ಗಂಟೆಗೆ ಕುಮಾರಲಿಂಗೇಶ್ವರ ದೇವರ ಅಡ್ಡೆಯನ್ನು ದೇವಸ್ಥಾನದಿಂದ ಜಾತ್ರಾ ಬನಕ್ಕೆ ಮೆರವಣಿಗೆಯಲ್ಲಿ ತರಲಾಗುವದು. ಮಧ್ಯಾಹ್ನ 1 ರಿಂದ ಸಂಜೆ 5ರವರೆಗೆ ಭಕ್ತರಿಂದ ಹಣ್ಣು- ಕಾಯಿ ಸಮರ್ಪಣೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.