ವೀರಾಜಪೇಟೆ, ಜ. 15: ಕೂಲಿ ಕಾರ್ಮಿಕನಾಗಿ ನಗರಕ್ಕೆ ಅಗಮಿಸಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಬಳಿ ನಡೆದಿದೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾಲೂರು ನಿವಾಸಿ ಬಸವರಾಜು ಅಲಿಯಾಸ್ ಈರಯ್ಯ (55) ಅತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಮೃತ ಬಸವರಾಜು ವಿವಾಹವಾಗಿದ್ದು, ಪತ್ನಿ, ಎರಡು ಮಕ್ಕಳನ್ನು ತ್ಯಜಿಸಿದ್ದ ಎನ್ನಲಾಗಿದೆ. ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣದಿಂದ ಗಡಿಯಾರ ಕಂಬದತ್ತ ಸಾಗುವ ಕಾಲುದಾರಿಯಲ್ಲಿರುವ ನಂಬುಡುಮಾಡ ಸುನಂದ ಅವರ ಬಾಡಿಗೆ ಮನೆಯಲ್ಲಿ 3 ತಿಂಗಳಿನಿಂದ ವಾಸವಿದ್ದು, ತಾ. 14ರÀ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಸಂಬಂಧಿಕ ಭೀಮಯ್ಯ ಗೌಡ ನೀಡಿದ ದೂರಿನ ಮೇರೆಗೆ ನಗರ ಪೊಲೀಸು ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲು ಮಾಡಲಾಗಿದ್ದು, ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.