ನಾಪೆÇೀಕ್ಲು, ಜ. 15: ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ನಾಪೆÇೀಕ್ಲು ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‍ನ ಸಂಚಾಲಕಿ ಮೂವೇರ ರೇಖಾ ಪ್ರಕಾಶ್, ಸದಸ್ಯರಾದ ಬಿದ್ದಂಡ ಉಷಾ ದೇವಮ್ಮ, ಕೇಲೇಟಿರ ಚಿತ್ರಾ ನಾಣಯ್ಯ, ಕೋಟೆರ ನೈಲ್ ಚಂಗಪ್ಪ, ಈ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಮೋಜು ಮಸ್ತಿಯ ತಾಣವಾಗಿದೆ. ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುವ ಕೆಲಸವಾಗುತ್ತಿದೆ. ಅಲ್ಲಿನ ಅಂಗಡಿ ಮುಂಗಟ್ಟುಗಳನ್ನು ಕೂಡಲೇ ತೆರವು ಗೊಳಿಸಬೇಕು. ಭಕ್ತರಿಗೆ ಮಾತ್ರ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು. ಬೆಟ್ಟಕ್ಕೆ ತೆರಳುವವರಿಗೆ ಹಿಂತಿರುಗಲು ಕಾಲ ಮಿತಿ ನಿಗದಿಪಡಿಸಬೇಕು. ಕ್ಷೇತ್ರಕ್ಕೆ ಬರುವವರು ಸಾಂಪ್ರದಾಯಿಕ ಉಡುಗೆ ತೊಡಲು ಕ್ರಮಕೈಗೊಳ್ಳಬೇಕು. ತ್ರಿವೇಣಿ ಸಂಗಮದ ಬಳಿ ಅಡಿಗೆ ಮಾಡಿ ಊಟ ಮಾಡುವದನ್ನು ನಿಷೇಧಿಸಬೇಕು. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಸ್ಥಳೀಯ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕುಲ್ಲೇಟಿರ ಹೇಮಾ ಅರುಣ್ ಬೇಬಾ, ಅಜ್ಜೇಟಿರ ರಾಣಿ ಪಳಂಗಪ್ಪ ಇದ್ದರು.