ಸಿದ್ದಾಪುರ, ಜ. 15: ಸಿದ್ದಾಪುರದ ಗುಹ್ಯ ಗ್ರಾಮದ ಕೂಡುಗದ್ದೆಯ ಕಾವೇರಿ ನದಿಯಲ್ಲಿ ಅಧಿಕೃತ ಮರಳುಗಾರಿಕೆಗೆ ಇಂದು ಚಾಲನೆ ದೊರೆತಿದೆ. ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಅಧಿಕೃತ ಮರಳುಗಾರಿಕೆ ಮಾಡಲು ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಹಿಂದೆ ಗುಹ್ಯ ಕೂಡುಗದ್ದೆ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಅಕ್ರಮ ಮರಳು ದಂಧೆಯ ವಿರುದ್ದ ‘ಶಕ್ತಿ’ ಸವಿಸ್ತಾರವಾದ ವರದಿ ಪ್ರಕಟಿಸಿತ್ತು ಇದಾದ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದವರ ವಿರುದ್ದ ಪ್ರಕರಣ ದಾಖಲಿಸಿದ್ದರು. ಇದೀಗ ಸರ್ಕಾರದ ವತಿಯಿಂದ ಗುಹ್ಯ ಗ್ರಾಮದಲ್ಲಿ ಅಧಿಕೃತ ಮರಳುಗಾರಿಕೆಗೆ ಟೆಂಡರ್ ಕರೆದಿದ್ದು, ಪಡೆದು ಕೊಂಡವರು ಕೆಲಸ ಆರಂಭಿಸಿದರು.

ಈ ಸಂದರ್ಭ ಗುತ್ತಿಗೆದಾರರಾದ ಸತೀಶ್, ಥೋಮಸ್, ವಿಜು ಇತರರು ಹಾಜರಿದ್ದರು.