ಮಡಿಕೇರಿ, ಜ. 13: ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾವೂರಿನ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕಾಡಿನ ಮಕ್ಕಳ ಹಬ್ಬದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಆದಿವಾಸಿಗಳು ತಮ್ಮ ಕಲಾಪ್ರದರ್ಶನ ನೀಡಿದರು. ವಿವಿಧ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾ ಪ್ರದರ್ಶನ ನೀಡಿದರು.
ತಾ. 12 ರಂದು ನಡೆದ ಕಾರ್ಯಕ್ರಮದಲ್ಲಿ ಸಿದ್ಧಿ ಕಲಾತಂಡದ ನೃತ್ಯ, ಪುಗಡಿ ನೃತ್ಯ, ಧಮಾಮ್ನ ನೃತ್ಯ, ಹಿಗ್ಮೋ ನೃತ್ಯ, ಜಾಕೈ ನೃತ್ಯ, ಹಂಜಾಂ ನೃತ್ಯ, ಸೇರಿದಂತೆ ವಿವಿಧ ರಾಜ್ಯಗಳ ಆದಿವಾಸಿಗಳು ಪ್ರದರ್ಶನ ನೀಡಿದರು. ಇದರೊಂದಿಗೆ ಜಿಲ್ಲೆಯ ಮೇದರ ಪರಕೊಟ್ಟು ನೃತ್ಯ ಹಾಗೂ ಕೊಡಗಿನ ವಾಲಗ ನೃತ್ಯಗಳು ಗಮನ ಸೆಳೆದವು. ತಾ. 14 ರಂದು ಇಂದು ಕೂಡ ಕಾಡಿನ ಮಕ್ಕಳ ಕಲಾ ಪ್ರದರ್ಶನ ನಡೆಯಲಿದೆ.