ಮಡಿಕೇರಿ, ಜ. 11: ಪ್ರತಿದಿನ ರಾತ್ರಿ 11.30 ಗಂಟೆಗೆ ಮಡಿಕೇರಿಯಿಂದ ಬೆಂಗಳೂರು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಬೆಂಗಳೂರು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಡಿಕೇರಿಗೆ ಮಧ್ಯಾಹ್ನ 12.30 ಗಂಟೆಗೆ ‘ಫ್ಲೈ ಬಸ್, ಸೂಪಿರಿಯರ್’ ತಾ. 12 ರಿಂದ (ಇಂದಿನಿಂದ) ಪ್ರಾರಂಭಗೊಳ್ಳಲಿದೆ ಎಂದು ಕರ್ನಾಟಕ ಸಾರಿಗೆ ಸಂಚಾರ ನಿಯಂತ್ರಣ ಅಧಿಕಾರಿ ಜಿ.ಎನ್. ನಾರಾಯಣ ತಿಳಿಸಿದ್ದಾರೆ.