ಮಡಿಕೇರಿ, ಜ. 11: ವಿಶೇಷ ಚೇತನ ಹೊಂದಿದ ಮಕ್ಕಳ ಪಾಲನೆ ಪೋಷಣೆಗೆ ಶ್ರಮಿಸುತ್ತಿರುವ ಸಾಧ್ಯ ಟ್ರ್ರಸ್ಟ್ ಫಾರ್ ಸೋಶಿಯಲ್ ಡೆವೆಲಪ್‍ಮೆಂಟ್‍ನ ಉದ್ಘಾಟನಾ ಸಮಾರಂಭ ಮತ್ತು ಮಾಜಿ ಸೈನಿಕರ ಸನ್ಮಾನ ಸಮಾರಂಭ ಜನವರಿ 12ರಂದು (ಇಂದು) ಮಕ್ಕಂದೂರು ಗ್ರಾಮದ ಸಹಕಾರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸಾಧ್ಯ ಟ್ರಸ್ಟ್‍ನ ಅಧ್ಯಕ್ಷ ಬಿ.ಎಸ್. ರಮೇಶ್ ಮಾತನಾಡಿ, ಕಾರ್ಯಕ್ರಮ ತಮ್ಮದೇ ಮಾಲಿಕತ್ವದ ಕುಶಾಲನಗರ ಮತ್ತು ಮಕ್ಕಂದೂರಿನ ಸುವರ್ಣ ಕಾಫಿ ವಕ್ರ್ಸ್‍ನ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಟ್ರಸ್ಟ್‍ನಿಂದ ಈಗಾಗÀಲೆ ಹಾಸನದಲ್ಲಿ 30 ವಿಶೇಷ ಚೇತನ ಮಕ್ಕಳು ಹಾಗೂ ಹೊಸಪೇಟೆಯಲ್ಲಿ 83 ಮಕ್ಕಳನ್ನು ಹೊಂದಿದ ಶಾಲೆಗಳು ನಡೆಯುತ್ತಿದೆ. ಇದನ್ನು ಸಾಧ್ಯ ಟ್ರಸ್ಟ್‍ನ ಸ್ಥಾಪಕಿ ಕೆ.ಟಿ.ಆರತಿ ನಿರ್ವಹಿಸುತ್ತಿರುವದಾಗಿ ತಿಳಿಸಿದರು.

ಕೊಡಗಿನಲ್ಲಿ ಟ್ರಸ್ಟ್‍ನ ಯಾವದೇ ಶಾಲೆಗಳು ಇಲ್ಲವಾದರು, ಮುಂಬರುವ ದಿನಗಳಲ್ಲಿ ಟ್ರಸ್ಟ್‍ನಿಂದ ಕುಶಾಲನಗರದಲ್ಲಿ ವಿಶೇಷ ಮಕ್ಕಳ ಪಾಲನೆ, ಪೋಷಣೆ ಮತ್ತು ಶಿಕ್ಷಣಕ್ಕೆ ಅನುಗುಣವಾದ ಬಿಎಸ್‍ಡಬ್ಲ್ಯು ಮತ್ತು ಎಂಎಸ್‍ಡಬ್ಲ್ಯು ಕೋರ್ಸ್‍ಗಳನ್ನು ಆರಂಭಿಸುವ ಚಿಂತನೆ ಹೊಂದಿರುವದಾಗಿ ತಿಳಿಸಿದರು.

ಟ್ರಸ್ಟ್‍ನ ಕಲ್ಯಾಣ ಸಮಿತಿ ಸದಸ್ಯ ಕುಡೆಕಲ್ ಸಂತೋಷ್ ಮಾತನಾಡಿ, ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವೆಲಪ್‍ಮೆಂಟ್‍ನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾಚಂಗಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ಕುಂಭಗೌಡನ ಎ. ಉತ್ತಪ್ಪ ವಹಿಸಲಿದ್ದಾರೆ. ಸಾಧ್ಯ ಶಾಲೆಗಳ ಸ್ಥಾಪಕರು ಮತ್ತು ಮುಖ್ಯಸ್ಥೆ ಕೆ.ಟಿ.ಆರತಿ, ಟ್ರಸ್ಟ್ ಕಾರ್ಯದರ್ಶಿ ಉಮೇಶ್ ಬೂಶಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.

35 ಮಂದಿ ಮಾಜಿ ಯೋಧರಿಗೆ ಸನ್ಮಾನ- ಸಮಾರಂಭದಲ್ಲಿ ಮಕ್ಕಂದೂರು , ಮುಕ್ಕೋಡ್ಲು, ಹೆಮ್ಮೆತ್ತಾಳು ಗ್ರಾಮ ವ್ಯಾಪ್ತಿಯಲ್ಲಿನ 35 ಮಂದಿ ಮಾಜಿ ಸೈನಿಕರನ್ನು ಗೌರವಿಸಲಾಗುತ್ತದೆ. ಅಂತರರಾಷ್ಟ್ರೀಯ ಶೂಟರ್ ಕ್ಯಾಪ್ಟನ್ ತಂಬುಕುತ್ತೀರ ಪಳಂಗಪ್ಪ, ಕ್ಯಾಪ್ಟನ್ ಬಿ.ಎನ್. ಅಚ್ಚಯ್ಯ ಅವರು ಸನ್ಮಾನವನ್ನು ಸ್ವೀಕರಿಸಲಿದ್ದಾರೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಾಧ್ಯ ಟ್ರಸ್ಟ್‍ನ ಕೆ.ಟಿ. ಅನುಕೂಲ್ ಉಪಸ್ಥಿತರಿದ್ದರು.