ವೀರಾಜಪೇಟೆ, ಜ. 11: ವೀರಾಜಪೇಟೆ ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಸ್ಥಾನದಲ್ಲಿ ತಾ.14ರಂದು ಪ್ರಾತಃಕಾಲ ಮಕರ ಸಂಕ್ರಾಂತಿ ಪ್ರಯುಕ್ತ ಭಕ್ತಾದಿಗಳ ಪರವಾಗಿ ನವಗ್ರಹ ದೋಷ ನಿವಾರಣೆಗೋಸ್ಕರ ನವಗ್ರಹ ಹೋಮ ಬೆಳಿಗ್ಗೆ 5.30ರಿಂದ 8.30ರವರೆಗೆ ಪೂರ್ಣಾಹುತಿ ಹಾಗೂ ಮಹಾ ಪೂಜಾ ಸೇವೆ ನಡೆಯಲಿದೆ ಎಂದು ಕಾರ್ಯದರ್ಶಿ ರತ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.