ವೀರಾಜಪೇಟೆ, ಜ. 11: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯ ದಲ್ಲಿ ತಾ14ರಂದು ಮಕರ ಸಂಕ್ರಾಂತಿ ಪೂಜೆ ಜರುಗಲಿದೆ. ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪನಿಗೆ ಬೆಳಗಿನಿಂದಲೇ ವಿವಿಧ ಅಭಿಷೇಕ, ಪೂಜೆಗಳು ನೆರವೇರಲಿವೆ. ಸಂಜೆ 6.45ಕ್ಕೆ ಅಯ್ಯಪ್ಪ ಜ್ಯೋತಿಯ ಮಹಾಪೂಜಾ ಸೇವೆ ನಡೆಯಲಿದೆ. ನಂತರ ಉತ್ಸವ ಮೂರ್ತಿ ಚಂಡೆಮೇಳದೊಂದಿಗೆ ದೇವಾಲಯದ ಸುತ್ತ ನೃತ್ಯ ಪ್ರದಕ್ಷಿಣೆ ನೆರವೇರಲಿದೆ.