ಮಡಿಕೇರಿ, ಜ. 11: ಮಡಿಕೇರಿ ತಾಲೂಕು ಆಹಾರ ನಿರೀಕ್ಷಕರಾಗಿದ್ದು, ಇದೀಗ ನಿವೃತ್ತಿ ಹೊಂದಿರುವ ಎಂ.ಕೆ. ಉತ್ತಯ್ಯ ಅವರಿಗೆ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ವತಿಯಿಂದ ಬೀಳ್ಕೊಡಲಾಯಿತು. ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಯ್ಯ ಅವರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಬೀಳ್ಕೊಡಲಾಯಿತು.