ಮಡಿಕೇರಿ, ಜ. 10: ಕೂತಂಡ ಪೂವಯ್ಯ ಹಾಗೂ ಪಾರ್ವತಿ ಪೂವಯ್ಯ ಜ್ಞಾಪಕಾರ್ಥ ಸ್ವಾಮಿ ವಿವೇಕಾನಂದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯೊಂದು ತಾ. 13 ರಂದು ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆಯಲಿದೆ.
ಗೌರವ ಅತಿಥಿಯಾಗಿ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಮುಖ್ಯ ಅತಿಥಿಗಳಾಗಿ ಭಾರತೀಯ ವಿದ್ಯಾಭವನ ಶಾಲೆಯ ಉಪಾಧ್ಯಕ್ಷ ಕೂತಂಡ ಪಿ. ಉತ್ತಪ್ಪ, ಕಾವೇರಿ ಕಾಲೇಜಿನ ಪ್ರಾಂಶುಪಾಲರುಗಳಾದ ಎನ್.ಎಂ. ನಾಣಯ್ಯ ಮತ್ತು ಪ್ರೊ. ಸಿ.ಎಂ. ನಾಚಪ್ಪ ಭಾಗವಹಿಸಲಿದ್ದಾರೆ.