ಮಡಿಕೇರಿ, ಜ. 10: ಕ್ರೀಡೆಯಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಕೊಡಗಿನ ಇಬ್ಬರು ಕ್ರೀಡಾ ತಾರೆಗಳಿಗೆ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ನೀಡಲಾಗುವ ಕರ್ನಾಟಕ ಒಲಿಂಪಿಕ್ಸ್ ಪ್ರಶಸ್ತಿ ದೊರೆತಿದೆ. ರಾಜ್ಯದಲ್ಲಿ ಹಲವು ಕ್ರೀಡಾಪಟುಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಲ್ಲಿ ಕೊಡಗಿನವರಾದ ಪುದಿಯೊಕ್ಕಡ ಮೀನಾ ಮತ್ತು ಬೆಲ್ಲು ಸೋಮಯ್ಯನವರ ಪುತ್ರ ಹಾಕಿ ತಾರೆ ಪ್ರಧಾನ್ ಸೋಮಣ್ಣ, ಹಾಕಿಯಲ್ಲಿನ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಬಾಳೆಯಡ ಕೆ. ಸುಬ್ರಮಣಿ ಅವರಿಗೆ ಈ ಪ್ರಶಸ್ತಿ ಲಭ್ಯವಾಗಿದೆ.ಸುಬ್ರಮಣಿ ಪ್ರaಸ್ತುತ ಬೆಳಗಾವಿಯಲ್ಲಿ ಲೆಫ್ಟಿನಿಂಟ್ ಕರ್ನಲ್ ಹುದ್ದೆಯಲ್ಲಿದ್ದು, ಜಿಲ್ಲೆಯ ದಿವಗಂತ ಬಾಳೆಯಡ ಕಾಳಯ್ಯ ಹಾಗೂ ಲೀಲಾ ದಂಪತಿಯ ಪುತ್ರ.

ಪ್ರಧಾನ್ ಸೋಮಣ್ಣ ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಪಂದ್ಯಾವಳಿಯೊಂದರಲ್ಲಿ ಪಾಲ್ಗೊಂಡಿದ್ದು, ತಾ. 11ರಂದು (ಇಂದು) ರಾಜ್ಯಪಾಲರು ಪ್ರಶಸ್ತಿ ವಿತರಿಸಲಿದ್ದಾರೆ.