ಸೋಮವಾರಪೇಟೆ, ಜ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಲಯದ ಏಳು ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಆಡಿನಾಡೂರು ಹಾಗೂ ಮುಳ್ಳೂರು ಗ್ರಾಮದ ಬಸವೇಶ್ವರ ದೇವಾಲಯ, ಪಟ್ಟಣದ ಸೋಮೇಶ್ವರ ದೇವಾಲಯ, ತಣ್ಣೀರುಹಳ್ಳದ ಸುಬ್ರಹ್ಮಣ್ಯ ದೇವಾಲಯ, ನಂದಿಗುಂದ ಗ್ರಾಮದ ಪಂಚಲಿಂಗೇಶ್ವರ ದೇವಾಲಯ, ದೊಡ್ಡಮಳ್ತೆ ಗ್ರಾಮದ ಕನ್ನಂಬಾಡಿ ಅಮ್ಮ ದೇವಾಲಯ, ಹಾರೆ ಹೊಸೂರು ಗ್ರಾಮದ ದೇವಾಲಯಗಳ ಸುತ್ತ ಮುತ್ತ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.

ತಣ್ಣೀರುಹಳ್ಳ ಗ್ರಾಮದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಕೆ. ರಮೇಶ್, ಒಕ್ಕೂಟದ ಅಧ್ಯಕ್ಷ ಸತೀಶ್, ಸಮಿತಿಯ ಅಧ್ಯಕ್ಷ ಹೇಮಂತ್‍ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ್, ಸದಸ್ಯೆ ಜಯಂತಿ ಶೆಟ್ಟಿ, ಯೋಜನೆಯ ಮೇಲ್ವಿಚಾರಕರು ಮತ್ತಿತರರು ಪಾಲ್ಗೊಂಡಿದ್ದರು.