ಸುಂಟಿಕೊಪ್ಪ, ಜ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾಕೂರು-ಶಿರಂಗಾಲ ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಒಕ್ಕೂಟದ ವತಿಯಿಂದÀ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಹಿನ್ನೆಲೆ ಶ್ರೀ ರಾಮಮಂದಿರ ಆವರಣದಲ್ಲಿ ಶ್ರಮದಾನವನ್ನು ನಡೆಸಲಾಯಿತು.
ಸ್ವಚ್ಛ ಭಾರತ ನಿರ್ಮಲ ಶ್ರದ್ಧಾ ಕೇಂದ್ರದ ಪರಿಕಲ್ಪನೆಯ ಹಿನ್ನಲೆ ಶ್ರದ್ಧಾ ಕೇಂದ್ರದ ಗರ್ಭಗೃಹ, ಒಳಾಂಗಣ, ಹೊರಾಂಗಣ ಪರಿಕರಗಳನ್ನು ಶುಚಿಗೊಳಿಸುವ ಕೆಲಸಕ್ಕೆ ಕಾನ್‍ಬೈಲ್ ತೋಟದ ವ್ಯವಸ್ಥಾಪಕ ಹೆಗ್ಡೆ ಚಾಲನೆ ನೀಡಿದರು.
ಸಂಘಗಳ ಸದಸ್ಯರು ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವ ಮೂಲಕ ಶ್ರಮದಾನವನ್ನು ನಡೆಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಮೇಲ್ವಿಚಾರಕಿ ಸರಸ್ವತಿ, ಸೇವಾ ಪ್ರತಿನಿಧಿ ಶಿವಕುಮಾರ್, ಒಕ್ಕೂಟದ ಉಪಾಧ್ಯಕ್ಷೆ ಯಶೋಧ ವಿವಿಧ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಇದ್ದರು.