ನಾಪೆÇೀಕ್ಲು, ಜ. 9: ನಾಪೆÇೀಕ್ಲು ಸಮೀಪದ ಕೊಳಕೇರಿ ಗ್ರಾಮದ ಕೇಟೋಳಿರ ರಾಜಾ ಚರ್ಮಣ್ಣ ಅವರ ತೋಟದಲ್ಲಿ ದಾರಿತಪ್ಪಿ ಬಂದ ಸುಮಾರು 5 ತಿಂಗಳು ಪ್ರಾಯದ ಕುರಿ ಮರಿಯನ್ನು ತೋಟದ ಕಾರ್ಮಿಕರು ರಕ್ಷಿಸಿ ಅರಣ್ಯ ಇಲಾಖಾ ವಶಕ್ಕೆ ಒಪ್ಪಿಸಿದ್ದಾರೆ.

ಇಂದು ಮಧ್ಯಾಹ್ನ ಯಾವದೋ ಪ್ರಾಣಿಗೆ ಬೆದರಿ ಓಡಿ ಬಂದ ಕುರಿ ಮರಿಯನ್ನು ಕಾರ್ಮಿಕ ವಿ.ಜೆ.ಮಂಜು ಮತ್ತು ಸುರೇಶ್ ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ತೋಟದ ಮಾಲಿಕ ರಾಜಾ ಚರ್ಮಣ್ಣ ಅರಣ್ಯ ಇಲಾಖೆಯ ನಾಪೆÇೀಕ್ಲು ಉಪವಲಯ ಅರಣ್ಯಾಧಿಕಾರಿ ಸುರೇಶ್ ಅವರಿಗೆ ಕುರಿ ಮರಿಯನ್ನು ಒಪ್ಪಿಸಿದರು.

ಈ ಸಂದರ್ಭ ಅರಣ್ಯ ರಕ್ಷಕ ಕಾಳೇಗೌಡ, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಸೋಮನಗೌಡ, ದೇವೇಂದ್ರ ಇದ್ದರು.