ಮಡಿಕೇರಿ, ಜ. 8: ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾ. 9 ರಂದು (ಇಂದು) ಜಿಲ್ಲೆಗೆ ಆಗಮಿಸಿ ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು. ಈ ಸಂಬಂಧ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗಣ್ಯರ ರಸ್ತೆ ¥್ರÀವಾಸದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಹಾಗೂ ಗಣ್ಯರು ಸಂಚರಿಸುವ ಮಾರ್ಗದಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಕೋರಿದ್ದಾರೆ.
ವಾಹನ ನಿಲುಗಡೆ: ಬಸ್‍ಗಳು ಆರ್.ಎಂ.ಸಿ ಮೈದಾನ (ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ), ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ.
ಲಘುವಾಹನಗಳು ಮತ್ತು ದ್ವಿಚಕ್ರ ವಾಹಾನಗಳಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ಜಿ.ಟಿ. ವೃತ್ತದಿಂದ ಸುದರ್ಶನ ವೃತ್ತದವರೆಗೆ (ಮೈಸೂರು ರಸ್ತೆ), ರಸ್ತೆಯ ಬಲಬದಿಯಲ್ಲಿ ಅವಕಾಶ ನೀಡಲಾಗಿರುತ್ತದೆ.
ವಾಹನ ನಿಲುಗಡೆ ನಿಷೇಧ: (ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ) ಗಾಲ್ಫ್ ಮೈದಾನದಿಂದ ಎಫ್.ಎಂ.ಎಸ್ ಕಾಲೇಜು ಹಿಂಬದಿ ರಸ್ತೆ, ಮೈತ್ರಿ ಜಂಕ್ಷನ್, ಆರ್ಮಿ ಕ್ಯಾಂಟೀನ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಹೊಸ ಬಡಾವಣೆ ಜಂಕ್ಷನ್, ರಾಜಾಸೀಟ್ ರಸ್ತೆ, ಗಾಂಧಿ ಮೈದಾನ ರಸ್ತೆಗಳಲ್ಲಿ ಯಾವದೇ ರೀತಿಯ ವಾಹನಗಳನ್ನು ಎರಡೂ ಬದಿಯಲ್ಲಿ ನಿಲುಗಡೆಗೊಳಿಸಲು ನಿಷೇಧಿಸಲಾಗಿದೆ.
ಜಿ.ಟಿ. ವೃತ್ತದಿಂದ ಸುದರ್ಶನ ವೃತ್ತದವರೆಗೆ (ಮೈಸೂರು ರಸ್ತೆ), ರಸ್ತೆಯ ಎಡಬದಿಯಲ್ಲಿ ಯಾವದೇ ರೀತಿಯ ವಾಹನಗಳನ್ನು ನಿಲುಗಡೆ ಗೊಳಿಸಲು ನಿಷೇಧಿಸಲಾಗಿದೆ.
ಚೈನ್ ಗೇಟ್ ಜಂಕ್ಷನ್‍ನಿಂದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳುವ ಕೆಳಗಿನ ಗೌಡ ಸಮಾಜದ ರಸ್ತೆಯ ಎರಡೂ ಬದಿಯಲ್ಲಿ ಯಾವದೇ ರೀತಿಯ ವಾಹನಗಳನ್ನು ನಿಲುಗಡೆ ಗೊಳಿಸಲು ನಿಷೇಧಿಸಲಾಗಿದೆ.
ಖಾಸಗಿ ಬಸ್ ನಿಲ್ದಾಣದಿಂದ ಸರ್ಕಾರಿ ಜೂನಿಯರ್ ಕಾಲೇಜು ಮಾರ್ಗವಾಗಿ ಮ್ಯಾನ್ಸ್ ಕಾಂಪೌಂಡ್ (ಜಿಲ್ಲಾ ಕ್ರೀಡಾಂಗಣ) ಕಡೆಗೆ ತೆರಳುವ ರಸ್ತೆ ಮಾರ್ಗದಲ್ಲಿ (ಕ್ಯಾಪಿಟಲ್ ಹೊಟೇಲ್ ಮುಂಭಾಗ ರಸ್ತೆ) ಎರಡೂ ಬದಿಯಲ್ಲಿ ಯಾವದೇ ರೀತಿಯ ವಾಹನಗಳನ್ನು ನಿಲುಗಡೆಗೊಳಿಸಲು ನಿಷೇಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಎಸ್‍ಪಿ ತಿಳಿಸಿದ್ದಾರೆ.