ಕುಶಾಲನಗರ, ಜ. 8: ಮಂಗಳೂರಿನಲ್ಲಿ ನಡೆದ ಬಷೀರ್ ಹತ್ಯೆ ಖಂಡಿಸಿ ಎಸ್‍ಡಿಪಿಐ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ಸಂಘ ಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಜರಂಗದಳ, ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಮೃತನ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ನಗರ ಅಧ್ಯಕ್ಷ ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಆಬಿದ್, ಉಪಾಧ್ಯಕ್ಷ ಭಾಷಾ, ಪ್ರಮುಖರಾದ ಹನೀಫ್, ಮನ್ಸೂರ್, ಮುಜೀಬ್, ಖಲೀಲ್, ಡಿಎಸ್‍ಎಸ್ ಸಂಚಾಲಕ ಕೆ.ಬಿ.ರಾಜು ಇದ್ದರು.