ವೀರಾಜಪೇಟೆ, ಜ. 8: ವೀರಾಜಪೇಟೆ ಪ.ಪಂ.ಯ ನೈರ್ಮಲ್ಯ ವಿಭಾಗದ 26ಮಂದಿ ನೌಕರರನ್ನು ವಜಾಗೊಳಿಸಿ ಬೀದಿಗೆ ಕಳುಹಿಸಿರುವ ದನ್ನು ಖಂಡಿಸಿರುವದಾಗಿ ಜೆ.ಡಿ.ಎಸ್ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ತಿಳಿಸಿದ್ದಾರೆ.
ಇದರಿಂದಾಗಿ ಎಲ್ಲಾ ನೌಕರರು ಕೆಲಸವಿಲ್ಲದೆ ಅತಂತ್ರರಾಗಿದ್ದು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ವಜಾದ ಆದೇಶವನ್ನು ಪುನರ್ ಪರಿಶೀಲಿಸಿ ಉದ್ಯೋಗದ ಅವಕಾಶ ನೀಡಬೇಕು ಇದಕ್ಕೆ ಮುಖ್ಯ ಮಂತ್ರಿಗಳು ಮಧ್ಯೆ ಪ್ರವೇಶಿಸಿ ಅತಂತ್ರದಲ್ಲಿರುವ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಮಂಜುನಾಥ್ ಒತ್ತಾಯಿಸಿದ್ದಾರೆ.