ಸುಂಟಿಕೊಪ್ಪ, ಜ.8: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಚಾಲಕರಿಗೆ ರಸ್ತೆ ತಿರುವು, ಇತರ ಎಚ್ಚರಿಕೆಗಳನ್ನು ನೀಡುವ ಸೂಚನಾ ಫಲಕಗಳ ಮೇಲೆ ಕಾಂಗ್ರೆಸ್ ಪಕ್ಷದÀ ನಾಯಕರ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿರುವದು ವಾಹನ ಚಾಲಕರಿಗೆ ಅಪಾಯ ತಂದೊಡ್ಡುತ್ತಿವೆ. ಎಲ್ಲಾ ಸೂಚನಾ ಫಲಕಗಳನ್ನು ಕಾಣದಂತೆ ಫ್ಲೆಕ್ಸ್‍ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಇಲ್ಲದಂತಾಗಿದೆ. ನಿಯಮಾನುಸಾರ ಸರಕಾರಿ ಸ್ವತ್ತು, ಸೂಚನಾ ಫಲಕಗಳ ಮೇಲೆ ಯಾವದೆ ಭಿತ್ತಿಚಿತ್ರ, ಫ್ಲೆಕ್ಸ್‍ಗಳನ್ನು ಅಳವಡಿಸುವಂತಿಲ್ಲ. ಆದರೆ ಪಕ್ಷದ ಕಾರ್ಯಕರ್ತರು ಕೊಡಗಿನ ಗಡಿಯಿಂದ ಮಡಿಕೇರಿ ಪಟ್ಟಣ ಸೇರಿದಂತೆ ಕಾರ್ಯಕ್ರಮ ನಡೆಯುವ ಜಿಲ್ಲಾ ಕ್ರೀಡಾಂಗಣದವರೆಗೂ ಫ್ಲೆಕ್ಸ್ ಅಳವಡಿಸಲಾಗಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಜಿಲ್ಲಾ ಪ್ರವಾಸದ ಹಿನೆÀ್ನಲೆಯಲ್ಲಿ ಸ್ವಾಗತ ಬ್ಯಾನರ್‍ಗಳನ್ನು ಎಲ್ಲೆಡೆಯಲ್ಲಿ ಅಳವಡಿಸಿದ್ದು, ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಿರುವ ಅಪಘಾತ ಸೂಚನಾ ಫಲಕದಲ್ಲೂ ಹಾಕಿರುವದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ.
ಇದರಿಂದ ಹೊರಭಾಗದಿಂದ ಆಗಮಿಸುವ ಪ್ರವಾಸಿಗರಿಗೆ ರಸ್ತೆಯ ಬಗ್ಗೆ ಸೂಕ್ತ ಮಾಹಿತಿ ತಿಳಿಯದೆ ಅವಘಡವಾಗುವ ಸಂಭವವಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ವಾಹನ ಚಾಲಕರು ಮತ್ತು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.