ಮಡಿಕೇರಿ, ಜ. 7: ಕಡಗದಾಳುವಿನ ಕಾರ್ನರ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾರ್ನರ್ ಫ್ರೆಂಡ್ಸ್ ಅಧ್ಯಕ್ಷ ವಿನುಸೋಮಣ್ಣ ವಹಿಸಿದ್ದರು. ಅತಿಥಿಗಳಾಗಿ ಕಡಗದಾಳು ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಕಾಫಿ ಬೆಳೆಗಾರ ರ್ಯಾಲಿ ಬಿದ್ದಪ್ಪ, ಕಡಗದಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಭಯ್ಯ, ಎಸ್‍ಎನ್‍ಡಿಪಿ ಮಡಿಕೇರಿ ಘಟಕದ ಅಧ್ಯಕ್ಷ ವಾಸುದೇವ, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

ಹಾಸನ ತಂಡಕ್ಕೆ ಜಯ : ಪಂದ್ಯಾಟದಲ್ಲಿ ಡಿ.ಜೆ. ಫ್ರೆಂಡ್ಸ್ ಹಾಸನ ಪ್ರಥಮ, ಗ್ರೀನ್ ಸ್ಟಾರ್ ಕರಿಕೆ ದ್ವಿತೀಯ, ರಾಹುಲ್ ಫ್ರೆಂಡ್ಸ್ ಮೈಸೂರು ತೃತೀಯ, ಸಮುದ್ರ ಮಡಿಕೇರಿ ನಾಲ್ಕನೆ ಬಹುಮಾನ ಗಳಿಸಿತು.