ಮಡಿಕೇರಿ, ಜ. 7: ವೀರಾಜಪೇಟೆಯ ಪ್ರಗತಿ ಪ್ರೌಢಶಾಲೆಯಲ್ಲಿ ತಾ. 10 ರಂದು ಪೂರ್ವಾಹ್ನ 11.30 ಗಂಟೆಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಏರ್ಪಡಿಸಲಾಗಿದೆ. ಪ್ರಗತಿ ಶಾಲಾ ಆಡಳಿತ ಹಾಗೂ ಅಲ್ಲಾರಂಡ ರಂಗ ಚಾವಡಿ ಕೆ. ಬಾಡಗ ಆಶ್ರಯದಲ್ಲಿ ಕಾರ್ಯಕ್ರಮವನ್ನು ಪೂಮಾಲೆ ಸಾಪ್ತಾಹಿಕ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಉದ್ಘಾಟಿಸಲಿದ್ದಾರೆ.
ಅಲ್ಲಾರಂಡ ವಿಠಲನಂಜಪ್ಪ ನಿರ್ದೇಶನದ ಕವಿ ಬದುಕು ಬಗ್ಗೆ 30 ನಿಮಿಷ ಸಾಕ್ಷ್ಯಚಿತ್ರ ಪ್ರದರ್ಶನವಿದ್ದು, ರಂಗಕರ್ಮಿ ಮಾದೇಟಿರ ಬೆಳ್ಯಪ್ಪ ಹಾಗೂ ಮಾದಂಡ ಎಸ್. ಪೂವಯ್ಯ, ಶಾಲಾ ಮಕ್ಕಳು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.