ಸೋಮವಾರಪೇಟೆ,ಜ.7: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ, ಮನೆಗೆ ಕಲ್ಲು ತೂರಿದ ಪ್ರಕರಣಗಳು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ.
ಈ ಹಿಂದೆ ನೀಡಲಾಗಿದ್ದ ಪೊಲೀಸ್ ದೂರಿಗೆ ಸಂಬಂಧಿಸಿದಂತೆ ಐಗೂರು ಗ್ರಾಮದ ಪಾರ್ವತಿ ಎಂಬವರೊಂದಿಗೆ ಅದೇ ಗ್ರಾಮದ ಸೋಮಯ್ಯ ಎಂಬವರು ತಗಾದೆ ತೆಗೆದು, ಪಾರ್ವತಿ ಅವರ ಮನೆಯ ಮೇಲೆ ಕಲ್ಲು ತೂರಿದ್ದು, ಇದರಿಂದ ಮನೆಯ ಕಿಟಕಿ ಗಾಜು ಹಾಗೂ ಹೆಂಚುಗಳು ಪುಡಿಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಮೀಪದ ಕಲ್ಕಂದೂರು ಗ್ರಾಮದ ಕುಮಾರ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ದಿನೇಶ್ ಗೌಡ ಎಂಬಾತ, ಈ ಹಿಂದೆ ಗ್ರಾಮ ಪಂಚಾಯಿತಿ ಗೇಟ್‍ಗೆ ಜೀಪು ಡಿಕ್ಕಿಪಡಿಸಿದ ವಿಚಾರವನ್ನು ಎಲ್ಲರಿಗೂ ತಿಳಿಸುತ್ತಿದ್ದೀಯಾ? ಎಂದು ಪ್ರಶ್ನಿಸಿ ಕುಮಾರ ಅವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.