ಕೂಡಿಗೆ, ಜ. 7: ಕೂಡಿಗೆ ಗ್ರಾ. ಪಂ. ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಹುಣಸೆಪಾರೆ ಜೇನು ಕುರುಬ ಹಾಡಿಗೆ ರಾಜ್ಯ ಆದಿವಾಸಿಗಳ ಬುಡಕಟ್ಟು ಸಂಘದ ಸಂಚಾಲಕ ಎಸ್.ಎನ್. ರಾಜಾರಾವ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಕೆಟ್ಟು ಹೋಗಿದ್ದ ನೀರಿನ ಪೈಪ್‍ಗಳನ್ನು ಸರಿಪಡಿಸಲು ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಿದರು. ಈಗಾಗಲೇ ಕೂಡಿಗೆ ಗ್ರಾ. ಪಂ. ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಪೈಪ್ ಅಳವಡಿಸಲಾಗಿದೆ. ಇದನ್ನು ಸಹ ಸರಿಪಡಿಸಲು ಈ ಸಂದರ್ಭ ಆಗ್ರಹಿಸಿದರು. ಗ್ರಾ. ಪಂ. ಸದಸ್ಯ ಟಿ.ಕೆ. ವಿಶ್ವನಾಥ್ ಹಾಗೂ ಹಾಡಿಯ ಪ್ರಮುಖರು ಇದ್ದರು.