ಮಡಿಕೇರಿ, ಜ. 7: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ತಾ. 15 ರಂದು ಭಾಗಮಂಡಲದಲ್ಲಿ ಚಂಡಿಕಾಯಾಗವನ್ನು ಹಮ್ಮಿ ಕೊಳ್ಳಲಾಗಿದೆ.
ಈ ಟ್ರಸ್ಟ್‍ನ ವತಿಯಿಂದ ಕೊಡವರಿಗೆ (ಶ್ರೀ ಅಗಸ್ತೇಶ್ವರ ಸ್ವಾಮಿಯ ಶಾಪ) ಹಾಗೂ ಅಮ್ಮ ಕೊಡವರಿಗೆ (ಶ್ರೀ ಕಾವೇರಮ್ಮೆಯ ಶಾಪ) ಇದ್ದ ಶಾಪ ವಿಮೋಚನೆಗಾಗಿ ಕೊಡವ ಮತ್ತು ಅಮ್ಮ ಕೊಡವ ಜನಾಂಗದವರು ಸೇರಿ ಜನಾಂಗದ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕ ಕಲ್ಯಾಣಕ್ಕಾಗಿ ತಾ. 15 ರಿಂದ 22ರ ವರೆಗೆ ಶ್ರೀ ಕಾವೇರಿ ಕ್ಷೇತ್ರದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮುಂಭಾಗ ಬಯಲು ಪ್ರದೇಶದಲ್ಲಿ ಯಜುಃ ಸಂಹಿತಾ ಯಾಗ (ಕೃಷ್ಣಯಜುರ್ವೇದ) ಹಾಗೂ ಚಂಡಿಕಾ ಹೋಮವನ್ನು ನಡೆಸಲಾಗಿದ್ದು, ತದನಂತರ ಇದೇ ಸ್ಥಳದಲ್ಲಿ ಜನಾಂಗದ ಹಾಗೂ ಲೋಕ ಕಲ್ಯಾಣಕ್ಕಾಗಿ ವರ್ಷಂಪ್ರತಿ ಜನವರಿ 15 ರಂದು ಒಂದು ದಿವಸದ ಶ್ರೀ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶಥರುದ್ರಾಭಿಷೇಕ ಪಠಣ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಇದರಂತೆ ಈ ವರ್ಷ ತಾ. 15 ರಂದು ಸದರಿ ಪೂಜೆಗಳನ್ನು ನಡೆಸಲು ತೀರ್ಮಾನಿಸಿದ್ದು, ಪೂಜೆಯು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಟ್ರಸ್ಟ್‍ನ ಪ್ರಕಟಣೆ ತಿಳಿಸಿದೆ.