ಸೋಮವಾರಪೇಟೆ,ಜ.7: ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು, ಶಿವರಳ್ಳಿ, ಊರುಗುತ್ತಿ, ಕ್ಯಾತೆ ಗ್ರಾಮಗಳನ್ನು ಒಳಗೊಂಡಂತೆ ವಾರ್ಷಿಕವಾಗಿ ನಡೆಸಲ್ಪಡುವ ಬಾಣಂತಮ್ಮ ಜಾತ್ರಾ ಮಹೋತ್ಸವ ತಾ. 16ರಂದು ನಡೆಯಲಿದೆ.

ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಬಾಣಂತಮ್ಮ ಮತ್ತು ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದ್ದು, ಇದರ ಪ್ರಯುಕ್ತ ತಾ. 15ರಂದು ರಾತ್ರಿ 9. 30ಕ್ಕೆ ಮಡೆ ಪೂಜೆ, ಗಂಗಾ ಸ್ನಾನ, ಅಡುಗೆ ಒಲೆ ಪೂಜೆ, ಮಡೆ ಮೆರವಣಿಗೆ, ತಾ. 16ರಂದು ಜಾತ್ರೆ, ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಸುರೇಶ್ ತಿಳಿಸಿದ್ದಾರೆ.