ಭಾಗಮಂಡಲ, ಜ. 5: ಇಲ್ಲಿಗೆ ಸಮೀಪದ ಚೇರಂಬಾಣೆಯ ದಿನಸಿ ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದಾಗಿ ಲಕ್ಷಾಂತರ ಮೌಲ್ಯದ ಸಾಮಗ್ರಿ ಸುಟ್ಟು ಕರಕಲಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ.
ಅಲ್ಲಿನ ಮೇದಪ್ಪ ಎಂಬವರ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಮೇದಪ್ಪ ಅವರು ಬೆಂಕಿ ಹೊತ್ತಿಕೊಂಡಾಗ ಹೊರಗೋಡಿದ್ದು, ಹೆಚ್ಚಿನ ಅಪಾಯ ತಪ್ಪದಂತಾಗಿದೆ. ಅಕ್ಕ ಪಕ್ಕದವರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಯಾವದೇ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬರುವಷ್ಟರಲ್ಲಿ ದಿನಸಿ ಹಾಗೂ ಫ್ಯಾನ್ಸಿ ಸಾಮಗ್ರಿಗಳೆಲ್ಲ ಸುಟ್ಟು ಕರಕಲಾಗಿ ಸುಮಾರು 2 ರಿಂದ 3 ಲಕ್ಷ ನಷ್ಟ ಸಂಭವಿಸಿದೆ ಎನ್ನಲಾಗಿದೆ.