ಶ್ರೀಮಂಗಲ, ಜ. 6: ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ಸರ್ಕಾರಿ ಪೈಸಾರಿ ಸ.ನಂ. 76/65 ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ, ಮದ್ಯದ ಅಂಗಡಿ ವ್ಯಾಪಾರ ಮಾಡುತ್ತಿದ್ದ ಸುಬ್ಬಯ್ಯ ಬಾರ್ (ಟಿ.ಎಸ್. ಚಾಮಿ) ಕಟ್ಟಡವನ್ನು ತಹಶೀಲ್ದಾರ್ ಆದೇಶದಂತೆ ತೆರವುಗೊಳಿಸಲಾಗಿದೆ.