ಗೋಣಿಕೊಪ್ಪ ವರದಿ, ಜ. 6: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ತಾ. 8 ರಂದು ಕರೆ ನೀಡಿರುವ ಬಂದ್‍ಗೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಬೆಂಬಲ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ, ಬಂದ್ ನಡೆಸಲು ವರ್ತಕರುಗಳ ಸಂಪೂರ್ಣ ಬೆಂಬಲವಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಪಟ್ಟಣದಲ್ಲಿ ಬಂದ್ ನಡೆಸಲಾಗುವದು. ಈ ವಿಚಾರದಲ್ಲಿ ಸಹಕಾರ ನೀಡಲಾಗುವದು ಎಂದು ತಿಳಿಸಿದ್ದಾರೆ.