ಶ್ರೀಮಂಗಲ, ಜ. 6: ಪೊನ್ನಂಪೇಟೆ ಕೇಂದ್ರವಾಗಿಸಿ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಕಳೆದ 66 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಬಿರುನಾಣಿ ಹಾÀಗೂ ಪೊನ್ನಂಪೇಟೆಯ ವಿವಿಧ ಮಹಿಳಾ ಸಂಘಟನೆಗಳು ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದವು.

ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದ ವಿವಿಧ ಸಂಘಟನೆಯ ಮಹಿಳೆಯರು, ಪೊನ್ನಂಪೇಟೆಯ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆ ಎದುರು ಮಾನವ ಸರಪಳಿ ನಡೆಸಿ ರಸ್ತೆ ತಡೆ ಕೈಗೊಂಡರು. ಈ ಸಂದರ್ಭ ಪೊನ್ನಂಪೇಟೆಯ ಅಂಗನವಾಡಿ ಕಾರ್ಯಕರ್ತೆ ದೇವಮ್ಮ ಮಾತನಾಡಿ, ಕೊಡಗಿನಲ್ಲಿ ಕಳೆದ 17 ವರ್ಷದಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಶಾಂತಿಯುತವಾÀಗಿ ಹೋರಾಟ ನಡೆಸಲಾಗುತ್ತಿದೆ, ಹಾಗೆಯೇ ಕಳೆದ 66 ದಿನಗಳಿಂದ ಗಾಂಧಿ ಪ್ರತಿಮೆ ಎದುರು ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ¸ರ್ಕಾರದ ಗಮನ ಸೆಳೆಯುವ ಕೆಲಸ ನಡೆಯುತ್ತಿದೆ ಎಂದರು.

ಪೊನ್ನಂಪೇಟೆಯ ಶ್ರೀ ಕಾವೇರಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸಿ.ಜಿ.ಲಲಿತ, ಬಿರುನಾಣಿಯ ಪುತ್ತು ಭಗವತಿ, ಸ್ತ್ರೀ ಶಕ್ತಿ ಸಂಘದ ಕುಪ್ಪಣಮಾಡ ಬೇಬಿ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪ್ರಮುಖರಾದ ಕಾಳಿಮಾಡ ಮೋಟಯ್ಯ, ಕೋಳೇರ ದಯಾ ಚಂಗಪ್ಪ, ಚೆಪ್ಪುಡಿರ ಸೋಮಯ್ಯ, ಮೂಕಳೆರ ಕುಶಾಲಪ್ಪ ತಾಲೂಕು ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮತ್ತಿತರರು ಮಾತನಾಡಿದರು.

ಈ ಸಂದರ್ಭ ಬಿರುನಾಣಿಯ ಕಳಕೂರು ಪುತ್ತುಭಗವತಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಕುಪ್ಪಣಮಾಡ ಕಾವೇರಿ, ಕಾರ್ಯದರ್ಶಿ ಕಾಳಿಮಾಡ ಉಷಾ ಬಾಯಿ, ಪವಿತ್ರಾ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಅಲೆಮಾಡ ಮೀನ, ಕಾರ್ಯದರ್ಶಿ ಕಳಕಂಡ ಕನಿಕೆ, ಪೊನ್ನಂಪೇಟೆಯ ಶಿವ ಕಾಲೋನಿಯ ಶ್ರೀ ಕಾವೇರಿ ಸ್ತ್ರೀ ಶಕ್ತಿ ಸಂಘದ ಅದ್ಯಕ್ಷೆ ಸಿ.ಜಿ. ಲಲಿತ, ಕಾರ್ಯದರ್ಶಿ ನಸೀಮಾ, ಕೊಡಗಿನ ಕಾವೇರಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ನಿರ್ಮಲ, ಕಾರ್ಯದರ್ಶಿ ಸಣ್ಣಮ್ಮ, ಸ್ನೇಹ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಭೋಜಮ್ಮ, ಕಾರ್ಯದರ್ಶಿ ಸುಮಲತ, ಜಂಟಿ ಕಾರ್ಯದರ್ಶಿ ಶಾಕಿರಾ, ಬಿರುನಾಣಿ ಕಳಕೂರು ಸ್ವಸಹಾಯ ಸಂಘದ ಅಧ್ಯಕ್ಷ ಕುಪ್ಪಣಮಾಡ ಪೆಮ್ಮಯ್ಯ, ಕಾರ್ಯದರ್ಶಿ ಕಳಕಂಡ ಉತ್ತಪ್ಪ, ಪೊನ್ನಂಪೇಟೆ ಸಾಯಿ ಶಂಕರ್ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ರತ್ನ, ಕಾರ್ಯದರ್ಶಿ ಸುಮ, ಶಿವ ಕಾಲೋನಿಯ ವರಮಹಾಲಕ್ಷ್ಮಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ರಂಜಿನಿ, ಬಿರುನಾಣಿ ಕಳಕೂರು ಭಗವತಿ ಸ್ವಸಹಾಯ ಸಂಘದ ಅಧ್ಯಕ್ಷೆ ಕುಪ್ಪಣಮಾಡ ತಾರಾ ಹಾಗೂ ಕುಪ್ಪಣಮಾಡ ಮಧುರ ಹಾಜರಿದ್ದರು.

ಬೆಂಬಲ: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ತಾ.8 ರಂದು ನಡೆಸಲು ಉದ್ದೆಶಿಸಿರುವ ಬಂದ್‍ಗೆ ಶ್ರೀಮಂಗಲ ಚೆಂಬರ್ ಆಫ್ ಕಾಮರ್ಸ್ ಸಂಪೂರ್ಣ ಬೆಂಬಲ ನೀಡುವದಾಗಿ ಸಂಸ್ಥೆಯ ಅಧ್ಯಕ್ಷ ಮಾಣಿರÀ ಮುತ್ತಪ್ಪ ರವರು ತಿಳಿಸಿದ್ದಾರೆ.