ವೀರಾಜಪೇಟೆ, ಜ. 6: ಇಲ್ಲಿನ ಪಂಜರಪೇಟೆ ಕೊಡವ ಕೇರಿಯ 13ನೇ ವರ್ಷದ ಒತ್ತೋರ್ಮೆ ಕೂಟ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹೇಶ್ ನಾಚಯ್ಯ, ಕೊಡವ ಜನಾಂಗಕ್ಕೆ ಹಿರಿಯರು ತೋರಿಸಿ ಕೊಟ್ಟಿರುವ ಒಳ್ಳೆತನ, ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಎಲ್ಲ್ಲರೂ ಉಳಿಸಿ ಕೊಂಡರೆ ಮಾತ್ರ ಭವಿಷ್ಯದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದರು. ಹಿರಿಯರು ಕೊಡವರಿಗೆ ಬದುಕಿನ ಎಲ್ಲಾ ಆಯಾಮಗಳನ್ನು ಒದಗಿಸಿಕೊಟ್ಟಿದ್ದಾರೆ. ಇದನ್ನು ಪೋಷಿಸಿ, ಪಾಲಿಸಿಕೊಂಡು ಹೋಗುವದಷ್ಟೆ ನಮ್ಮ ಕೆಲಸ. ನಮಗೆ ಹೊಸದಾಗಿ ಯಾವದೇ ಸಾಂಸ್ಕøತಿಕ ಮಜಲುಗಳನ್ನು ಸೃಷ್ಟಿಸಿಕೊಳ್ಳ ಬೇಕಾಗಿಲ್ಲ. ಇಂತಿರುವಾಗ ಪ್ರತಿಯೊಬ್ಬರಲ್ಲಿ ಕೊಡವ ಸಂಸ್ಕøತಿಯ ಮೇಲೆ ಅಭಿಮಾನ ಅವಶ್ಯ. ಕೊಡವ ರೆಂದರೆ ವಿಶಾಲ ಮನೋಭಾವನೆ ಇರುವ ಜನಾಂಗ. ಕಷ್ಟದ ಸಮಯದಲ್ಲಿ ಯಾರೇ ಬಂದರು ಹೃದಯ ವೈಶಾಲ್ಯತೆ ಮೆರೆಯಬೇಕಾದದ್ದು ನಮ್ಮತನ ವಾಗಿರಬೇಕು. ಇದರಲ್ಲಿ ಯಾವದೇ ಜಾತಿ-ಜನಾಂಗ, ಧರ್ಮದ ಗೋಡೆ ಇರಕೂಡದು ಎಂದರು. ಕೊಡವ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕಾಣಿಕೆ ನೀಡಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಜನ್ಮೋತ್ಸವದ ಅಂಗವಾಗಿ ಕವಿಯ ನೆನೆದು ಹಾಡುವದರ ಮೂಲಕ ಕೊಡವ ಮಹಾಕವಿಗೆ ನಮಿಸಿದರು.
ಕೇರಿಯ ಸದಸ್ಯರಿಗೆ ಹಾಡುಗಾರಿಕೆ, ಮಿಮಿಕ್ರಿ, ಚಿಕ್ಕ ಮಕ್ಕಳಿಗೆ ಬೆಲೂನು ಸಿಡಿಸುವದು, ಲಕ್ಕಿ ಪರ್ಸನ್ಸ್ ಆಫ್ ದ ಡೇ, ಬರ್ನಿಂಗ್ ದ ಟ್ರೈನ್, ಪಾಯ್‍ಸನ್ ಬಾಲ್, ಆದರ್ಶ ದಂಪತಿ ಸ್ಪರ್ಧೆ-ಪೈಪೋಟಿ ನಡೆಯಿತು. ಬೊಳಿಯಾಡಿರ ಮನು ಮುತ್ತಪ್ಪ-ಗ್ರೇಸಿ ದಂಪತಿಗಳು ‘ಆದರ್ಶ ದಂಪತಿ’ಗಳಾಗಿ ಪ್ರಶಸ್ತಿ ಪಡೆದುಕೊಂಡರು.
ರಾತ್ರಿ ಊಟೋಪಚಾರದ ನಂತರ ತಾಂಬೋಲ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಸಂಜೆಯಿಂದ ಮಧ್ಯರಾತ್ರಿಯವರೆಗೆ ಕೇರಿಯ ಸದಸ್ಯರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಧ್ಯರಾತ್ರಿಯ ನಂತರ ಎಲ್ಲರೂ ಹೊಸ ವರ್ಷದ ಶುಭಾಶಯ ಕೋರಿದರು.
ಆದರ್ಶ ದಂಪತಿ ಕಾರ್ಯ ಕ್ರಮವನ್ನು ನಿರ್ದೇಶಕಿ ಕಳ್ಳಿಚಂಡ ಡಿಂಪಲ್ ನಾಚಪ್ಪ ನಡೆಸಿಕೊಟ್ಟರು. ಗೌರವ ಕಾರ್ಯದರ್ಶಿ ಬೊವ್ವೇರಿಯಂಡ ಮೋಹನ್ ಮೊಣ್ಣಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಕೊಪ್ಪಿರ ಅಮಿತ್ ಸೋಮಯ್ಯ ವಂದಿಸಿದರು. ಕೇರಿ ಸಮಿತಿಯ ನಿರ್ದೇಶಕರುಗಳಾದ ಬೊಳಿಯಾಡಿರ ಮನು ಮುತ್ತಪ್ಪ, ಕೊಂಗಾಂಡ ಪ್ರತೀಕ ಡೆಟ್ರಾನ್, ಕಾಳಚೆಟ್ಟಿರ ಜಯಾ ತಮ್ಮಯ್ಯ, ಆಟ್ರಂಗಡ ನವೀನ್ ಬೋಜಪ್ಪ, ಆಟ್ರಂಗಡ ಲೋಹಿತ್, ಕೋಟ್ರಮಾಡ ರಮೇಶ್, ಬಲ್ಯಮೀದೇರಿರ ಸತೀಶ್ ಹಾಗೂ ಕೇರಿಯ ಸದಸ್ಯರು ಪಾಲ್ಗೊಂಡಿದ್ದರು.