ಮಡಿಕೇರಿ, ಜ. 5: ಪ್ರಗತಿಪರ ಸೇವಾ ಸಂಸ್ಥೆ ಮಂಡ್ಯ ಆಯೋಜಿಸಿದ್ದ 15ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ಏಳು ವಿದ್ಯಾರ್ಥಿಗಳು ಕಲಾಸಿರಿ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ಪಡೆದಿದ್ದಾರೆ. ತಾಲೂಕು ಮಟ್ಟದಲ್ಲಿ ಯಶ್ ಮಾಚಯ್ಯ, ಬೋಜಮ್ಮ ಎನ್.ಡಿ. ಇವರು ಪ್ರಥಮ ಸ್ಥಾನವನ್ನು, ಜಿಲ್ಲಾ ಮಟ್ಟದಲ್ಲಿ ಸಮೃದ್ಧಿ ಕೆ.ಟಿ., ಸಿಂಚನ್ ಎಂ.ಎಂ. ಮತ್ತು ತಂಗಮ್ಮ ಪಿ.ಪಿ. ಇವರು ಪ್ರಥಮ ಸ್ಥಾನವನ್ನು, ರಾಜ್ಯ ಮಟ್ಟದಲ್ಲಿ ಸೃಷ್ಠಿ ಬಿ.ಎಸ್. ಮತ್ತು ಪ್ರಣವ್ ಪಿ.ಪಿ. ಇವರು ಪ್ರಥಮ ಸ್ಥಾನವನ್ನು ಪಡೆದಿ ದ್ದಾರೆ. 2ನೇ ತರಗತಿಯ ವಿದ್ಯಾರ್ಥಿನಿ ಬಿ.ಎಸ್. ಸೃಷ್ಠಿಯನ್ನು ಶಾಲೆಯ ಪ್ರಾಂಶುಪಾಲರು ಸನ್ಮಾನಿಸಿದರು. ಶಾಲೆಯ ಪ್ರಾಂಶು ಪಾಲ ಪಿ.ಎನ್. ವಿನೋದ್, ಮುಖ್ಯೋಪಾಧ್ಯಾಯಿನಿ ಚಿಣ್ಣಮ್ಮ ಸಿ.ಎಸ್. ಹಾಗೂ ಸಹ ಶಿಕ್ಷಕಿ ಅನುಪಮ ತಿಮ್ಮಯ್ಯ ಹಾಜರಿದ್ದರು.
ವಿಜ್ಞಾನ ಪ್ರಶಸ್ತಿ
19ನೇ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ಎಂಟು ವಿದ್ಯಾರ್ಥಿಗಳು ವಿಜ್ಞಾನ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ಪಡೆದಿದ್ದಾರೆ. 8ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಗಾಯನ ಬೋಪಣ್ಣ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು, ತ್ರಿಷ ಜಿಲ್ಲಾಮಟ್ಟದಲ್ಲಿ ಪ್ರಥಮ, ರಾಶಿ ಮುತ್ತಮ್ಮ ಜಿಲ್ಲಾಮಟ್ಟದಲ್ಲಿ ದ್ವಿತೀಯ ಹಾಗೂ ಗಾನವಿ ಬೋಪಣ್ಣ ತಾಲೂಕಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ.