ಮಡಿಕೇರಿ, ಜ. 5: ನಾಗರಹೊಳೆ ವನ್ಯಧಾಮದಲ್ಲಿ ತಾ. 7 ರಿಂದ ಮೂರು ದಿನಗಳ ಕಾಲ ಸಫಾರಿ ಸ್ಥಗಿತಗೊಳ್ಳಲಿದೆ. ಹುಲಿ ಗಣತಿಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸುತ್ತಾಡುತ್ತಿದ್ದ ವ್ಯಾಘ್ರವೊಂದನ್ನು ಸೆರೆ ಹಿಡಿಯುವ ಯತ್ನದಲ್ಲಿದ್ದಾಗ ಇದು ಕಾಡಿನೊಳಗೆ ಸೇರಿಕೊಂಡಿದೆ. ಆದರೂ ಕಾರ್ಯಾಚರಣೆ ಮುಂದುವರಿ ಯಲಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.