ವೀರಾಜಪೇಟೆ, ಜ. 6: ತಾ. 9 ರಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಾಧನಾ ಸಮಾರಂಭಕ್ಕೆ ಜಿಲ್ಲಾ ಸೇವಾದಳದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸೇವಾದಳದ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಹೇಳಿದರು.

ಸೇವಾದಳದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎಲ್. ಸಯನುದ್ದೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಾಯತ್ರಿ ನರಸಿಂಹನ್, ಕಾರ್ಯದರ್ಶಿ ಡಿ.ಎಲ್. ಸುಬ್ಬಯ್ಯ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಚಾರಿಮಂಡ ಶರಣು ನಂಜಪ್ಪ, ನಗರ ಅಧ್ಯಕ್ಷ ಯುವರಾಜ್ ಕೃಷ್ಣ ಉಪಸ್ಥಿತರಿದ್ದರು.